ರಾಯ್ಪುರ್: ಇಬ್ಬರು ನಕ್ಸಲ್ ಕಮಾಂಡರ್ ಸೇರಿ ಮೂವರು ನಕ್ಸಲರನ್ನು ಭದ್ರತಾ ಪಡೆ ಯೋಧರು ಹತ್ಯೆಗೈದಿದ್ದಾರೆ.
ಛತ್ತೀಸ್ ಗಢ್ ದ ಬಸ್ತಾರ್ ನಲ್ಲಿ ಭದ್ರತಾ ಪಡೆ ಯೋಧರು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು ಇದರಲ್ಲಿ ಇಬ್ಬರು ನಕ್ಸಲ್ ಕಮಾಂಡರ್ ಸೇರಿ ಮೂವರು ನಕ್ಸಲರು ಮೃತಪಟ್ಟಿದ್ದಾರೆ. ನಾರಾಯಣಪುರ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಕಮಾಂಡರ್ ಗಳು ಮೃತಪಟ್ಟರೆ ಮತ್ತೋರ್ವ ನಕ್ಸಲ್ ಕೊಂಡಗಾನ್ ನಲ್ಲಿ ಹತ್ಯೆಗೀಡಾಗಿದ್ದಾನೆ ಎಂದು ಬಸ್ತರ್ ನ ಪ್ರಧಾನ ಆರಕ್ಷಕ ನಿರೀಕ್ಷಕ ಕಲ್ಲೂರಿ ಹೇಳಿದ್ದಾರೆ.
ಶಸ್ತ್ರಾಸ್ತ್ರಸರ್ಜಿತ 20 ನಕ್ಸಲರಿದ್ದ ಜಾಗವನ್ನು ಪತ್ತೆ ಹಚ್ಚಿದ ಭದ್ರತಾ ಪಡೆ ಯೋಧರು ವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ನಕ್ಸಲರು ಸಹ ಪ್ರತಿ ದಾಳಿ ನಡೆಸಿದ್ದಾರೆ. ಈ ಗುಂಡಿನ ದಾಳಿ ಮೂವರು ನಕ್ಸಲರು ಹತರಾಗಿದ್ದಾರೆ.