ಮುಂಬೈನ ರೈಲು ನಿಲ್ದಾಣವೊಂದರಲ್ಲಿ ರೈಲಿಗೆ ಹತ್ತುವ ಆತುರದಲ್ಲಿ ಮಹಿಳೆಯೊಬ್ಬರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ರೈಲಿನ ಕೆಳಗೆ ಸಿಲುಕಿಕೊಂಡಾಗ ಅಲ್ಲೇ ಇದ್ದ ಪೊಲೀಸ್ ಪೇದೆಯೊಬ್ಬರು ಆಕೆಯನ್ನು ಹಿಡಿದೊಳೆದು ಜೀವ ಉಳಿಸಿದ್ದು ಈ ವಿಡಿಯೋವನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ.
ಮುಂಬೈನ ಲೋನವಾಲ್ ಪೊಲೀಸ್ ಠಾಣೆಯ ಪೇದೆ ಪವನ್ ತ್ಯಾದೆ ಅವರು ರೈಲಿಗೆ ಸಿಲುಕಬೇಕಿದ್ದ ಮಹಿಳೆಯನ್ನು ರಕ್ಷಿಸಿ ಇದೀಗ ಮುಂಬೈನಲ್ಲಿ ಹಿರೋ ಆಗಿದ್ದಾರೆ. ಪೇದೆ ಪವನ್ ಅವರು ಸಮಯ ಪ್ರಜ್ಞೆಗೆ ನನ್ನ ಸೆಲ್ಯೂಟ್ ಎಂದು ಅಕ್ಷಯ್ ಕುಮಾರ್ ಬರೆದುಕೊಂಡಿದ್ದಾರೆ.