ನವದೆಹಲಿ: ಭಾರತದ ಗಡಿಯಲ್ಲಿ ಅತಿಕ್ರಮಣ ದಾಳಿ ದಾಳಿಗಳು ನಡೆದರೆ ಸಂಪೂರ್ಣ ಬಲದಿಂದ ದಿಟ್ಟ ಉತ್ತರ ನೀಡಿ ಎಂದು ಯೋಧರಿಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಬುಧವಾರ ಹೇಳಿದ್ದಾರೆ.
ಉರಿ ಸೆಕ್ಟರ್ ನ ಸೇನಾ ಪ್ರಧಾನ ಕಚೇರಿ ಮೇಲೆ ನಡೆದ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಮನೋಹರ್ ಪರಿಕ್ಕರ್ ಅವರು ಭಾರತೀಯ ಸೇನೆ, ಭಾರತೀಯ ವಾಯುಪಡೆ ಹಾಗೂ ಭಾರತೀಯ ನೌಕಾಪಡೆಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಭದ್ರತಾ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.
ಇದೇ ವೇಳೆ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸುವ ಅವರು, ಅತಿಕ್ರಮಣಗಳು, ಒಳನುಸುಳುವಿಕೆಯಂತಹ ದಾಳಿಗಳು ನಡೆದಿದ್ದೇ ಆದರೆ, ಸಂಪೂರ್ಣ ಬಲದಿಂದ ದಿಟ್ಟ ಉತ್ತರ ನೀಡಿ ಎಂದು ಭಾರತೀಯ ಸೇನೆಗೆ ತಿಳಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.