ದೇಶ

ಪಾಕ್ ಮೇಲಿನ ಸೀಮಿತ ದಾಳಿ: ಸೇನೆ ಹಾಗೂ ಮೋದಿ ನಡೆಯನ್ನು ಶ್ಲಾಘಿಸಿದ ರಾಹುಲ್ ಗಾಂಧಿ

Vishwanath S
ನವದೆಹಲಿ: ಪಾಕಿಸ್ತಾನ ವಿರುದ್ಧ ಭಾರತೀಯ ಸೇನೆಯ ಸೀಮಿತ ದಾಳಿ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಡೆಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಶಂಸಿಸಿದ್ದಾರೆ. 
ಭಾರತೀಯ ಸೇನೆಯ ಸೀಮಿತ ದಾಳಿಯು ನಿಜಕ್ಕೂ ಪ್ರಶಂಸನಿಯವಾಗಿದೆ. ಅಲ್ಲದೆ ಭಯೋತ್ಪಾದನೆ ವಿರುದ್ಧ ಪ್ರಧಾನಿ ಮೋದಿ ಅವರು ನಡೆಸಿದ ಕಾರ್ಯಾಚರಣೆ ಮೆಚ್ಚುಗೆಗೆ ಪಾತ್ರವಾಗಿದೆ. ನಾನು ನನ್ನ ಪಕ್ಷ ಮೋದಿ ಅವರ ನಡೆಯನ್ನು ಶ್ಲಾಘಿಸುತ್ತೇವೆ ಎಂದರು. 
ಲೋಕಸಭಾ ಚುನಾವಣೆ ಬಳಿಕ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಎರಡು ವರ್ಷಗಳು ಕಳೆದರೂ ಇಲ್ಲಿಯವರೆಗೂ ಮೋದಿ ಅವರು ಕೈಗೊಂಡಿದ್ದ ತೀರ್ಮಾನಗಳನ್ನು ಟೀಕಿಸುತ್ತಿದ್ದ ರಾಹುಲ್ ಗಾಂಧಿ ಅದೇ ಮೊದಲ ಬಾರಿಗೆ ಮೋದಿ ಅವರನ್ನು ಪ್ರಶಂಸಿಸಿದ್ದಾರೆ. 
ಭಾರತೀಯ ಯೋಧರು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಅಲ್ಲಿದ್ದ 7 ಉಗ್ರ ಕ್ಯಾಂಪ್ ಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಿದ್ದರು. ಕೇವಲ 4 ಗಂಟೆಯಲ್ಲಿ 39 ಉಗ್ರರನ್ನು ಹಾಗೂ 6 ಮಂದಿ ಪಾಕ್ ಸೈನಿಕರನ್ನು ಹತ್ಯೆ ಮಾಡಿ ವಾಪಸ್ಸಾಗಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದರು. 
SCROLL FOR NEXT