ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ 
ದೇಶ

ಅಖಿಲೇಶ್'ರಂತೆ ಬೇರೆ ಯಾರೂ ನನಗೆ ಈ ರೀತಿ ಅವಮಾನಿಸಿರಲಿಲ್ಲ; ಮುಲಾಯಂ ಸಿಂಗ್

ಉತ್ತರಪ್ರದೇಶ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಉಂಟಾಗಿದ್ದ ಸಮಾಜವಾದಿ ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಮತ್ತೊಮ್ಮೆ ಭುಗಿಲೆದ್ದಿದೆ....

ಲಖನೌ: ಉತ್ತರಪ್ರದೇಶ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಉಂಟಾಗಿದ್ದ ಸಮಾಜವಾದಿ ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಮತ್ತೊಮ್ಮೆ ಭುಗಿಲೆದ್ದಿದೆ. 
ನಿನ್ನೆಯಷ್ಟೇ ಮೈನ್ ಪುರದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿ ಮಾತನಾಡಿರುವ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು, ಅಖಿಲೇಶ್ ಅವರ ಕುರಿತಾಗಿ ಅವರಲ್ಲಿರುವ ಅಸಮಾಧಾನವನ್ನು ಹೊರಹಾಕಿದ್ದಾರೆ. 
ಜನರಿಗೆ ಪ್ರಾಮಾಣಿಕನಾಗಿರುವ ವ್ಯಕ್ತಿ, ತನ್ನ ತಂದೆಗೆ ಮಗ ಈ ರೀತಿಯಾಗಿ ಅವಮಾನವನ್ನು ಹೇಗೆ ಮಾಡಲು ಸಾಧ್ಯ? ತಂದೆಗೆ ದ್ರೋಹ ಬಗೆದವರು ಯಾರಿಗೂ ನಿಷ್ಠರಾಗಿರಲಾರರು. ರಾಜಕೀಯ ಜೀವನ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ತನ್ನ ಮಗನ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸಿದ್ದು ಇತಿಹಾಸದಲ್ಲೇ ಇರಲಿಲ್ಲ. ಆದರೆ, ಅದನ್ನು ನಾನು ಮಾಡಿದ್ದೆ. 2012ರ ಚುನಾವಣೆಯಲ್ಲಿ ಜನರು ನನ್ನನ್ನು ನಂಬಿ ಮತಹಾಕಿದ್ದರು. ಆದರೆ, ನಾನು ಅಖಿಲೇಶ್ ನನ್ನು ಮುಖ್ಯಮಂತ್ರಿ ಮಾಡಿದೆ. ಇದಕ್ಕೆ ಪ್ರತಿಯಾಗಿ ಅಖಿಲೇಶ್ ನನಗೆ ನೀಡಿದ್ದೇನು. ನನ್ನ ಜೀವನದಲ್ಲಿಯೇ ನಾನೆಂದಿಗೂ ಈ ರೀತಿಯಾಗಿ ಅವಮಾನಕ್ಕೊಳಗಾಗಿರಲಿಲ್ಲ. 
ಇಷ್ಟೆಲ್ಲಾ ಆದರೂ ನಾನು ಎಲ್ಲಿಯೂ, ಯಾರ ಬಳಿಯೂ ನನ್ನ ರಕ್ತವೇ ಇಂದು ನನ್ನ ವಿರುದ್ಧ ನಿಂತಿದೆ ಎಂದು ಹೇಳಿರಲಿಲ್ಲ. ಪಕ್ಷವೊಂದು ನನ್ನ ಮೇಲೆ ಒಂದಲ್ಲ ಮೂರು ಬಾರಿ ಕೊಲೆ ಮಾಡಲು ಸಂಚು ರೂಪಿಸಿತ್ತು. ಇಂತಹ ಪಕ್ಷದೊಂದಿಗೆ ನನ್ನ ಮಗ ಕೈಜೋಡಿಸಿರುವುದು ನಿಜಕ್ಕೂ ದುರಂತವೇ ಸರಿ ಎಂದು ತಿಳಿಸಿದ್ದಾರೆ. 
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ರನ್ನು ಮುಲಾಯಂ ಸಿಂಗ್ ಯಾದವ್ ಅವರು ಟೀಕಿಸುತ್ತಿರುವ ಸಂದರ್ಭದಲ್ಲಿ ಮುಲಾಯ ಸಹೋದರ ಶಿವಪಾಲ್ ಯಾದವ್ ಅವರ ಪಕ್ಕದಲ್ಲಿಯೇ ನಿಂತಿದ್ದರು. ಕಳೆದ ಬಾರಿಯ ಅಖಿಲೇಶ್ ಸಚಿವ ಸಂಪುಟದಿಂದ ಶಿವಪಾಲ್ ರಿಗೆ ಗೇಟ್ ಪಾಸ್ ನೀಡಿದ್ದಕ್ಕೆ ಮುಲಾಯಂ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!