ರಾಮೇಶ್ವರ: ಅಕ್ರಮವಾಗಿ ಮೀನುಗಾರಿಗೆ ನಡೆಸುತ್ತಿದ್ದಾರೆಂದು ಆರೋಪಿಸಿ ಬಂಧನಕ್ಕೊಳಪಡಿಸಿದ್ದ 38 ಮಂದಿ ಮೀನುಗಾರರ ಪೈಕಿ 18 ತಮಿಳುನಾಡು ರಾಜ್ಯ ಮೀನುಗಾರರನ್ನು ಶ್ರೀಲಂಕಾ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದೆ.
ಮಾರ್ಚ್ 21 ರಿಂದ 26 ಅಂತರದಲ್ಲಿ ಬಂಧನಕ್ಕೊಳಗಾಗಿದ್ದ 38 ಮೀನುಗಾರರ ಪೈಕಿ 18 ಮೀನುಗಾರರು ಇಂದು ಮಧ್ಯಾಹ್ನ 12 ಗಂಟೆಗೆ ಬಿಗುಡಗೆಯಾಗಲಿದ್ದು, ಮೀನುಗಾರರನ್ನು ಭಾರತದ ಅಧಿಕಾರಿಗಳ ವಶಕ್ಕೆ ಒಪ್ಪಿಸುವುದಾಗಿ ಕ್ಯೂ ಬ್ರಾಂಚ್ ಇನ್ಸ್'ಪೆಕ್ಟರ್ ಕೆನ್ನೆಡಿ ಮತ್ತು ಸಹಾಯಕ ನಿರ್ದೇಶಗ (ಮೀನುಗಾರಿಕೆ) ಕುಲಂಗೈನಾಥನ್ ಅವರು ಹೇಳಿದ್ದಾರೆ.
ಅಂತರರಾಷ್ಟ್ರೀಯ ಸಮುದ್ರ ಗಡಿಯ (ಐಎಂಬಿಎಲ್) ಸಮೀಪದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆಂದು ಆರೋಪಿ ಕಳೆದ ಮಾರ್ಚ್ ತಿಂಗಳ 21 ರಂದು 10 ಮೀನುಗಾರರನ್ನು ಶ್ರೀಲಂಕಾ ನೌಕಾ ಪಡೆ ಬಂಧನಕ್ಕೊಳಪಡಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಇದೇ ಆರೋಪದ ಮೇಲೆ ಮತ್ತೆ 16 ಮಂದಿ ಮೀನುಗಾರರನ್ನು ಬಂಧಿಸಿತ್ತು. ಮಾರ್ಚ್ 26ರಂದು ಪುದುಕೊಟ್ಟೈ ಜಿಲ್ಲೆಯಲ್ಲಿ 12 ಮಂದಿ ಮೀನುಗಾರರನ್ನು ಬಂಧಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics