ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ 
ದೇಶ

ಗೋರಕ್ಷಣೆ ಕುರಿತು ಮೋಹನ್ ಭಾಗವತ್ ಹೇಳಿಕೆ: ಜೆಡಿ(ಯು) ಖಂಡನೆ

ಗೋರಕ್ಷಣೆ ಕುರಿತಂತೆ ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ್ದ ಹೇಳಿಕೆಯನ್ನು ಜನತಾದಳ (ಸಂಯುಕ್ತ) ಪಕ್ಷ ಸೋಮವಾರ ಖಂಡಿಸಿದೆ...

ನವದೆಹಲಿ: ಗೋರಕ್ಷಣೆ ಕುರಿತಂತೆ ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ್ದ ಹೇಳಿಕೆಯನ್ನುಜನತಾದಳ (ಸಂಯುಕ್ತ) ಪಕ್ಷ ಸೋಮವಾರ ಖಂಡಿಸಿದೆ. 
ಭಾಗವತ್ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜೆಡಿ(ಯು) ನಾಯಕ ಅಲಿ ಅನ್ವಾರ್ ಅವರು, ಆರ್'ಎಸ್ಎಸ್ ಸಂಘಟನೆಯ ಸಿದ್ಧಾಂತಗಳನ್ನು ಯಾರು ಪಾಲನೆ ಮಾಡುತ್ತಿದ್ದಾರೋ, ಅವರು ಹಿಂಸಾಚಾರದಲ್ಲಿ ಭಾಗಿಯಾಗುತ್ತಿದ್ದಾರೆಂದು ಹೇಳಿದ್ದಾರೆ. 
ವಿವಾದಗಳನ್ನು ಹುಟ್ಟುಹಾಕಿದವರು ಮೊದಲು ನಿಲ್ಲಿಸಬೇಕು. ಪ್ರಸ್ತುತ ಅವರ ಪಕ್ಷ ಅಧಿಕಾರದಲ್ಲಿದೆ. ಪಕ್ಷದ ಸಿದ್ಧಾಂತಗಳನ್ನು ಪಾಲನೆ ಮಾಡುತ್ತಿರುವವರೇ ಇದನ್ನೆಲ್ಲಾ ಮಾಡುತ್ತಿದ್ದು, ಈ ರೀತಿಯ ಹಿಂಸಾಚಾರಗಳು ಕೇವಲ ಕ್ಷಣಿಕವಷ್ಟೇ, ದ್ವೇಷಪೂರಿತ ವಾತಾವರಣ ಕೆಲ ಸಮಯ ಮಾತ್ರವಷ್ಟೇ ಉಳಿದಿರುತ್ತದೆ ಎಂದು ತಿಳಿಸಿದ್ದಾರೆ. 
ಮತ್ತೊಬ್ಬ ಜೆಡಿಯು ನಾಯಕ ಕೆ.ಸಿ ತ್ಯಾಗಿಯವರು ಮಾತನಾಡಿ, ಮೋಹನ್ ಭಾಗವತ್ ಅವರ ಸಂಘಟನೆ ಕಾರ್ಯಕರ್ತರು ಗೋರಕ್ಷಣೆ ಹೆಸರಿನಲ್ಲಿ ಮನುಷ್ಯರನ್ನೇ ಹತ್ಯೆ ಮಾಡುತ್ತಿದ್ದಾರೆ. ಇದು ನಿಜಕ್ಕೂ ಅರಾಜಕತೆ. ಸಮಾಜ ವಿರೋಧಿಗಳು ಕಾನೂನನ್ನು ತಮ್ಮ ಕೈಗೆ ಎತ್ತಿಕೊಂಡು ತಮಗೆ ಇಷ್ಟಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಅಂತಹ ಜನರನ್ನುದ್ದೇಶಿಸಿ ಕೂಡ ಭಾಗವತ್ ಅವರು ಮಾತನಾಡಬೇಕಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!