ನವದೆಹಲಿ: ತಾವು ಹುಟ್ಟಿದ ಸಿಂಧ್ ಪ್ರಾಂತ್ಯ ಇದೀಗ ಭಾರತದ ಭಾಗವಾಗಿಲ್ಲ ಎಂಬುದೇ ದುಃಖಕರ ಸಂಗತಿ ಎಂದು ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಸೋಮವಾರ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಇಂಡಿಯಾ ಫೌಂಡೇಷನ್ ಅವೇರ್ನೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಎಲ್ ಕೆ ಅಡ್ವಾಣಿ, ಭಾರತದೊಂದಿಗಿನ ದಕ್ಷಿಣ ಏಷ್ಯಾದ ದೇಶಗಳ ಸಂಬಂಧ ಸುಧಾರಿಸಬೇಕಿದೆ. ಪ್ರಮುಖವಾಗಿ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸೌಹಾರ್ಧ ಸಂಬಂಧವನ್ನು ನಾನು ನೋಡಬಯಸುತ್ತೇನೆ. ಆದರೆ ಕೆಲವರ "ಉಗ್ರ ಪ್ರೀತಿ"ಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ ಎಂದು ಪರೋಕ್ಷವಾಗಿ ಪಾಕಿಸ್ತಾನಕ್ಕೆ ಟಾಂಗ್ ನೀಡಿದರು.
ಬಾಂಗ್ಲಾದೇಶ ಸೇರಿದಂತೆ ಕೆಲವು ದಕ್ಷಿಣ ಭಾರತದ ದೇಶಗಳೊಂದಿಗಿನ ಸಂಬಂಧ ಸುಧಾರಿಸಬೇಕಿದ್ದು, ನಮ್ಮ ನೆರೆ ಹೊರೆ ದೇಶಗಳೊಂದಿಗಿನ ಸೌಹಾರ್ಧ ಸಂಬಂಧ ಸುಧಾರಿಸಿದರೆ ತುಂಬಾ ಸಂತೋಶವಾಗುತ್ತದೆ. ನಾನು ಹುಟ್ಟಿದ್ದು, ಪ್ರಸ್ತುತ ಪಾಕಿಸ್ತಾನದ ಭಾಗವಾಗಿರುವ ಸಿಂಧ್ ಪ್ರಾಂತ್ಯದಲ್ಲಿ. ಸ್ವತಂತ್ರ್ಯ ಪೂರ್ವದಲ್ಲಿ ಭಾರತದ ಭಾಗವಾಗಿದ್ದ ಸಿಂದ್ ಪ್ರಾಂತ್ಯ ದೇಶ ವಿಭಜನೆ ಬಳಿಕ ಪಾಕಿಸ್ತಾನದ ಭಾಗವಾಗಿದೆ ಎಂಬುದೇ ದುಃಖಕರ ಸಂಗತಿ. ಸಿಂಧ್ ಪ್ರಾಂತ್ಯ ಭಾರತದಲ್ಲಿ ಎಂಬ ವಿಚಾರ ತಿಳಿದಾಗಲೆಲ್ಲಾ ದುಃಖವಾಗುತ್ತದೆ ಎಂದು ಅಡ್ವಾಣಿ ಹೇಳಿದ್ದಾರೆ.
ಅಂತೆಯೇ ಭಾರತ-ಪಾಕಿಸ್ತಾನದ ನಡುವಿನ ಸಂಬಂಧದ ಕುರಿತು ಮಾತನಾಡಿದ ಅಡ್ವಾಣಿ, ಪ್ರಸ್ತುತ ಬಾಂಗ್ಲಾದೇಶದೊಂದಿಗಿನ ಸಂಬಂಧ ಸುಧಾರಣೆಯಂತೆಯೇ ಪಾಕಿಸ್ತಾನದೊಂದಿಗಿನ ಭಾರತದ ಸಂಬಂಧ ಕೂಡ ಸುಧಾರಿಸಬೇಕಿದೆ ಎಂದು ಹೇಳಿದ್ದಾರೆ.
ಈ ಹಿಂದೆಯೂ ಸಾಕಷ್ಟು ಬಾರಿ ಸಿಂದ್ ಹಾಗೂ ಕರಾಚಿ ಕುರಿತು ಮಾತನಾಡಿದ್ದ ಅಡ್ವಾಣಿ, ಕರಾಚಿ ಮತ್ತು ಸಿಂದ್ ಪ್ರಾಂತ್ಯಗಳಿಲ್ಲದೇ ಭಾರತದ ಭೂಪಟ ಅಪೂರ್ಣವಾಗಿದೆ ಎಂದು ನನಗನ್ನಿಸುತ್ತದೆ ಎಂದು ಹೇಳಿದ್ದರು,