ದೇಶ

ಚುನಾವಣಾ ವಾಹನದ ಮೇಲೆ ದಾಳಿಗೆ ಉಗ್ರರು ಸಂಚು ರೂಪಿಸಿದ್ದರು: ಜಮ್ಮು-ಕಾಶ್ಮೀರ ಪೊಲೀಸರು

Manjula VN
ಶ್ರೀನಗರ: ಬಂಧಿತ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಭಯೋತ್ಪಾದಕ ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿದ್ದ ಕರ್ತವ್ಯ ನಿರತ ಚುನಾವಣಾ ವಾಹನದ ಮೇಲೆ ಗ್ರೆನೇಡ್ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬುಧವಾರ ಹೇಳಿದ್ದಾರೆ. 
ಗುಪ್ತಚರ ಇಲಾಖೆ ಖಚಿತ ಮಾಹಿತಿ ಆಧಾರದ ಮೇಲೆ ನಿನ್ನೆಯಷ್ಟೇ ಕುಲ್ಗಾಮ್ ನಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸೇನಾ ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿತ್ತು. ಕಾರ್ಯಾಚರಣೆ ವೇಳೆ ಓರ್ವ ಉಗ್ರನನ್ನು ಬಂಧನಕ್ಕೊಳಪಡಿಸಿತ್ತು. 
ಬಂಧಿತ ಉಗ್ರರ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಭಯೋತ್ಪಾದಕನಾಗಿದ್ದು, ಶಕೀರ್ ಅಹ್ಮದ್ ಎಂದು ಗುರ್ತಿಸಲಾಗಿದೆ. ಕಾರ್ಯಾಚರಣೆ ವೇಳೆ ಬಂಧನಕ್ಕೊಳಪಡಿಸಲಾದ ಉಗ್ರನಿಂದ ಸೇನಾಪಡೆ ಗ್ರೆನೇಡ್ ನ್ನು ವಶಕ್ಕೆ ಪಡೆದುಕೊಂಡಿತ್ತು. 
ಕ್ವಾಜಿಗುಂಡ್ ನಲ್ಲಿ ಪೊಲೀಸರಿಂದ ಬಂದೂಕುಗಳನ್ನು ಕಿತ್ತುಕೊಂಡ ಪ್ರಕರಣದಲ್ಲಿ ಶಕೀರ್ ಭಾಗಿಯಾಗಿದ್ದ. ಕರ್ತವ್ಯನಿರತ ಚುನಾವಣಾ ಬಸ್ ಮೇಲೆ ಗ್ರೆನೇಡ್ ದಾಳಿ ನಡೆಸಲು ಯತ್ನಿಸುತ್ತಿದ್ದ ವೇಳೆ ಈತನನ್ನು ಬಂಧನಕ್ಕೊಳಪಡಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. 
SCROLL FOR NEXT