ದೇಶ

ಆಪರೇಶನ್ ಮೇಘದೂತ್ ಗೆ 33 ವರ್ಷ: ಸರಿಸಾಟಿಯಿಲ್ಲದ ಶೌರ್ಯ, ತ್ಯಾಗದ ಪಯಣ

Sumana Upadhyaya
ನವದೆಹಲಿ: ಭಾರತೀಯ ಸೇನಾಪಡೆಯ ಕಾರ್ಯಾಚರಣೆಯ ಕೋಡ್ ಹೆಸರಾದ ಆರಪೇಷನ್ ಮೇಘದೂತ್ ಗೆ ಇಂದಿಗೆ 33 ವರ್ಷ. 
33 ವರ್ಷಗಳ ಹಿಂದೆ ಅಂದರೆ, 1984ರ ಏಪ್ರಿಲ್ 13ರ ಇದೇ ದಿನ ಜಮ್ಮು-ಕಾಶ್ಮೀರದ ಸಿಯಾಚಿನ್ ನೀರ್ಗಲ್ಲನ್ನು ಶತ್ರುಗಳಿಂದ ಜಯಿಸುವ ಮೂಲಕ ಆಪರೇಶನ್ ವೇಗದೂತ ಆರಂಭಗೊಂಡಿತ್ತು. ವಿಶ್ವದ ಅತಿ ಎತ್ತರದ ಪ್ರದೇಶದಲ್ಲಿ ಶತ್ರುಗಳೊಂದಿಗೆ ಮಿಲಿಟರಿ ಹೋರಾಟ ನಡೆಸಿದ್ದು ಒಂದು ಅವಿಸ್ಮರಣೀಯ ಘಟನೆ. ಇಡೀ ಸಿಯಾಚಿನ್ ನೀರ್ಗಲ್ಲಿನ ಹಿಡಿತವನ್ನು ಭಾರತೀಯ ಸೇನೆ ಸಾಧಿಸಿತ್ತು.
ಆಪರೇಶನ್ ಮೇಘದೂತ ಆರಂಭಗೊಂಡು ಇಂದಿಗೆ 33 ವರ್ಷ ಕಳೆದಿದ್ದು, ಸಿಯಾಚಿನ್ ನೀರ್ಗಲ್ಲಿನಲ್ಲಿ ಭಾರತೀಯ ಸೇನೆಯ ನಿಯೋಜನೆ ಇಂದಿಗೂ ಮುಂದುವರಿದಿದೆ. ವಿಶ್ವದ ಅತಿ ಎತ್ತರ ಮತ್ತು ಅತ್ಯಂತ ಕಡಿಮೆ ಉಷ್ಣತೆಯ ಪ್ರದೇಶದಲ್ಲಿ ಭಾರತೀಯ ಸೇನಾ ಯೋಧರ ಧೈರ್ಯ, ತ್ಯಾಗ, ಬಲಿದಾನವನ್ನು ಸ್ಮರಿಸಬೇಕಾಗಿದೆ.
ಪಾಕಿಸ್ತಾನ ಮತ್ತು ಚೀನಾ ಗಡಿ ಭಾಗದಲ್ಲಿ ಸಿಯಾಚಿನ್ ನೀರ್ಗಲ್ಲು ಇದೆ. ಈಶಾನ್ಯ ಭಾರತದ ಕರಕೋರಮ್ ತೀರದಲ್ಲಿ ಸಿಯಾಚಿನ್ ಇದ್ದು 76.4 ಕಿಲೋ ಮೀಟರ್ ಉದ್ದ ಮತ್ತು 10,000 ಚದರ ಕಿಲೋ ಮೀಟರ್ ನಿರ್ಜನ ಭೂಪ್ರದೇಶವನ್ನು ಒಳಗೊಂಡಿದೆ.
1974ರಲ್ಲಿ ಪಾಕಿಸ್ತಾನ ಪರ್ವತಾರೋಹಣ ಪರ್ಯಟನೆ ಅನುಮತಿ ಪ್ರಾರಂಭಿಸಿತು. 1983ರ ಹೊತ್ತಿಗೆ ಭಾರತಕ್ಕೆ ಸಿಯಾಚಿನ್ ನ್ನು ಉಳಿಸಿಕೊಳ್ಳಲು ಯೋಧರನ್ನು ನಿಯೋಜಿಸಿವುದು ಅನಿವಾರ್ಯವಾಗಿತ್ತು.
ಈ ದಿನದಂದು ಕ್ಯಾಪ್ಟನ್ ಸಂಜಯ್ ಕುಲಕರ್ಣಿ ಸಿಯಾಚಿನ್ ನೀರ್ಗಲ್ಲಿನ ಬಿಲಫೊಂಡ್ ಲಾದಲ್ಲಿ ಮೊದಲ ಬಾರಿಗೆ ಭಾರತದ ಧ್ವಜವನ್ನು ನೆಟ್ಟರು. ಅಲ್ಲಿಂದ ಆಪರೇಶನ್ ಮೇಘದೂತ ಆರಂಭಗೊಂಡಿತು.
SCROLL FOR NEXT