ಅಮಿತ್ ಶಾ 
ದೇಶ

ಉತ್ತರ ಪ್ರದೇಶದಂತೆ ಒಡಿಸ್ಸಾದಲ್ಲೂ ಬಿಜೆಪಿ ಕ್ಲೀನ್ ಸ್ವೀಪ್: ಅಮಿತ್ ಶಾ

95 ದಿನಗಳಲ್ಲಿ ಇಡಿ ದೇಶಾದ್ಯಂತ ಸಂಚರಿಸಿ ಬೂತ್ ಮಟ್ಟದಲ್ಲಿರುವ ದೇಶದ ಎಲ್ಲಾ ಕಾರ್ಯಕರ್ತರನ್ನು ಭೇಟಿಯಾಗುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ...

ಭುವನೇಶ್ವರ್: 95 ದಿನಗಳಲ್ಲಿ ಇಡಿ ದೇಶಾದ್ಯಂತ ಸಂಚರಿಸಿ ಬೂತ್ ಮಟ್ಟದಲ್ಲಿರುವ ದೇಶದ ಎಲ್ಲಾ ಕಾರ್ಯಕರ್ತರನ್ನು ಭೇಟಿಯಾಗುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು 95 ದಿನಗಳಲ್ಲಿ ಕೇರಳ, ಅಂಡಮಾನ್, ನಿಕೋಬಾರ್ ಸೇರಿದಂತೆ ದೇಶಾದ್ಯಂತ ಇರುವ ಎಲ್ಲಾ ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ.ಕೇವಲ ತಾವು ಮಾತ್ರವಲ್ಲದೇ ಕೇಂದ್ರ ಸಜಿವ ಸಂಪುಟದ ಮಂತ್ರಿಗಳು ಕೂಡ ಬೂತ್ ಮಟ್ಟದ ಕಾರ್ಯಕರ್ತರಕನ್ನು ಭೇಟಿಯಾಗಲಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 73 ರಿಂದ 80 ಸೀಟುಗಳನ್ನು ಜಯಗಳಿಸಲಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದರು, ಆದರೆ 403 ಸೀಟುಗಳಲ್ಲಿ ಬಿಜೆಪಿ 325 ಸೀಟುಗಳಲ್ಲಿ ಗೆಲುವು ಸಾಧಿಸಿತು ಎಂದು ಹೇಳಿದ್ದಾರೆ.
ಇನ್ನೂ ಒಡಿಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ರಾಜ್ಯದ ಶೇ.42 ರಷ್ಟು ಜನ ಬಡತನ ರೇಖೆಗಿಂತ ಕೆಳಗಿಳಿದ್ದು, ಅವರ ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲ. ಜನರಿಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು

3rd T20I: ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್, ವಿಂಡೀಸ್ ಗೆ ಗೆಲ್ಲಲು 224 ರನ್ ಗುರಿ ನೀಡಿದ ಭಾರತ