ಮುಂಬೈ: ಮುಂಬೈ ಸಮುದ್ರದಲ್ಲಿ ಕಳೆದ ರಾತ್ರಿ ಸಿಕ್ಕಿ ಹಾಕಿಕೊಂಡಿದ್ದ ಟಗ್ ಬೋಟ್ ಸೋನಿಕಾದಲ್ಲಿದ್ದ ನಾಲ್ವರು ಸಿಬ್ಬಂದಿಯನ್ನು ಭಾರತೀಯ ನೌಕಾಪಡೆಯ ಸಿ ಹೆಲಿಕಾಪ್ಟರ್ ರಕ್ಷಿಸಿದೆ.
ಸೋನಿಕಾ ನೌಕೆಯಿಂದ ಮುಂಬೈಯ ಮುಖ್ಯ ಪೊಲೀಸ್ ನಿಯಂತ್ರಣ ಕೊಠಡಿಗೆ ಸಂಕಷ್ಟದಲ್ಲಿ ಸಿಲುಕಿರುವ ಬಗ್ಗೆ ಕರೆಬಂತು. ಮುಂಬೈ ಸಮುದ್ರ ತೀರದ ಶಿವಾಜಿ ಪ್ರತಿಮೆ ನಿರ್ಮಾಣದ ಹತ್ತಿರ ನೀರಿನ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿತು. ಕಳೆದ ರಾತ್ರಿ 11.20ರ ಸುಮಾರಿಗೆ ಈ ಘಟನೆ ನಡೆದಿದ್ದು ನೌಕಾಪಡೆಯ ಸಿ ಹೆಲಿಕಾಪ್ಟರ್ ಸ್ಥಳಕ್ಕೆ ಧಾವಿಸಿ ಸಿಕ್ಕಿ ಹಾಕಿಕೊಂಡಿದ್ದ ಎಲ್ಲಾ ನಾಲ್ವರು ಸಿಬ್ಬಂದಿಯನ್ನು ರಕ್ಷಿಸಲಾಯಿತು.
ಐಎನ್ಎಸ್ ಶಿಕ್ರಾದ ವೈದ್ಯರು ಸಿಬ್ಬಂದಿಯ ವೈದ್ಯಕೀಯ ತಪಾಸಣೆ ನಡೆಸಿದರು.