ಸುಪ್ರೀಂ ಕೋರ್ಟ್ 
ದೇಶ

ಲ್ಯಾನ್ಸ್ ನಾಯ್ಕ್ ರಾಯ್ ಮ್ಯಾಥ್ಯು ಆತ್ಮಹತ್ಯೆ: ಸೇನೆಗೆ ನೊಟೀಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್

ಸೇನೆಯಲ್ಲಿರುವ ಸಹಾಯಕರು ಮತ್ತು ಇತರ ಕೆಳ ರ್ಯಾಂಕ್ ನ ಸಿಬ್ಬಂದಿಯನ್ನು ಹಿರಿಯ ಸಿಬ್ಬಂದಿ ಸೇವೆಗೆ...

ನವದೆಹಲಿ: ಸೇನೆಯಲ್ಲಿರುವ ಸಹಾಯಕರು ಮತ್ತು ಇತರ ಕೆಳ ರ್ಯಾಂಕ್ ನ ಸಿಬ್ಬಂದಿಯನ್ನು ಹಿರಿಯ ಸಿಬ್ಬಂದಿ ಸೇವೆಗೆ ಮತ್ತು ಗೃಹಕೃತ್ಯಗಳಿಗೆ ಒತ್ತಾಯಪೂರ್ವಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಪತ್ರಕರ್ತರೊಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರ್ಕಾರ ಮತ್ತು ಸೇನೆಗೆ ನೊಟೀಸ್ ಕಳುಹಿಸಿದೆ.
 ಪತ್ರಕರ್ತ ಚಿತ್ರೀಕರಿಸಿದ ರಹಸ್ಯ ವಿಡಿಯೋದಲ್ಲಿ ಲ್ಯಾನ್ಸೆ ನಾಯಕ್ ರಾಯ್ ಮ್ಯಾಥ್ಯೂ ಸೇನೆಯಲ್ಲಿ ಸಹಾಯಕ ವ್ಯವಸ್ಥೆ ಬಗ್ಗೆ ಟೀಕಿಸಿದ್ದರು.
ರಹಸ್ಯ ವಿಡಿಯೋದ ಬಿಡುಗಡೆ ನಂತರ ಲ್ಯಾನ್ಸ್ ನಾಯಕ್ ಮ್ಯಾಥ್ಯೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನ ಬಗ್ಗೆ ತನಿಖೆ ನಡೆಸಲು ಪತ್ರಕರ್ತ ಒತ್ತಾಯಿಸಿದ್ದರು.
ನಾಸಿಕ್ ಪೊಲೀಸರು ಅಧಿಕೃತ ರಹಸ್ಯ ಕಾಯ್ದೆ(ಒಎಸ್ಎ) ಮತ್ತು ಅಪರಾಧ ಅತಿಕ್ರಮಣ ಮತ್ತು ನಿಷೇಧಕ್ಕೆ ಸಂಬಂಧಿಸಿದಂತೆ ಪತ್ರಕರ್ತನ ವಿರುದ್ಧ ಕೇಸು ದಾಖಲಿಸಿದ್ದರು. 
ಎಫ್ಐಆರ್ ದಾಖಲನ್ನು ಪ್ರಶ್ನಿಸಿ ಪತ್ರಕರ್ತ ಸುಪ್ರೀಂ ಕೋರ್ಟ್ ಮೊರೆ ಹೋದರು. ಅಧಿಕೃತ ರಹಸ್ಯ ಕಾಯ್ದೆಯ ದುರ್ಬಳಕೆ ತಡೆಗಟ್ಟಲು ಸರಿಯಾದ ಮಾರ್ಗಸೂಚಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು. ಇದು ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವುದಲ್ಲದೆ ಪತ್ರಕರ್ತರ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ಅರ್ಜಿಯಲ್ಲಿ ವಿವರಿಸಿದರು. ಅಲ್ಲದೆ ಸೇನೆಯಲ್ಲಿ ಸಹಾಯಕ ವ್ಯವಸ್ಥೆಯನ್ನು ದುರ್ಬಳಕೆ ಮಾಡುವುದರ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕೂಡ ಒತ್ತಾಯಿಸಿದರು.
ನಿವೃತ್ತ ಸೇನಾ ಜವಾನ ದೀಪ್ ಚಂದ್, ಸೇನೆಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದು ಅವರು ಪತ್ರಕರ್ತರ ಜೊತೆ ಸಹ ಅರ್ಜಿದಾರರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!