ನವದೆಹಲಿ: ಛತ್ತೀಸ್ ಗಢದಲ್ಲಿ 25 ಸಿಆರ್ ಪಿಎಫ್ ಯೋಧರ ಹತ್ಯೆಯನ್ನು ಖಂಡಿಸಿರುವ ಸಿಪಿಐ, ಈ ಘಟನೆಯನ್ನು ಕೆಂಪು ಭಯೋತ್ಪಾದನೆ ಎಂದು ಕರೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.
ಸುಕ್ಮಾದಲ್ಲಿ ನಡೆದಿರುವ ಯೋಧರ ಹತ್ಯೆಯನ್ನು ಕಮ್ಯುನಿಸ್ಟ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಹುತಾತ್ಮ ಯೋಧರ ಕುಟುಂಬಗಳಿಗೆ ಪಕ್ಷ ಸಾಂತ್ವನ ಹೇಳುತ್ತದೆ ಆದರೆ ಈ ಘಟನೆಯನ್ನು ಕೆಂಪು ಭಯೋತ್ಪಾದನೆ ಎಂದು ಮಾತ್ರ ಕರೆಯಬೇಡಿ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಛತ್ತೀಸ್ ಗಢದಲ್ಲಿ ಬುಡಕಟ್ಟು ಜನರ ಪರವಾಗಿ ಎಡಪಕ್ಷಗಳ ಅನೇಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಎಡಪಕ್ಷಗಳು ಮಾವೋವಾದಿಗಳ ಕೃತ್ಯ, ರಾಜಕೀಯ, ಸೈದ್ಧಾಂತಿಕ ಹಾಗೂ ಹೋರಾಟದ ಹಿನ್ನೆಲೆಯಲ್ಲೂ ಒಪ್ಪುವುದಿಲ್ಲ. ಛತ್ತೀಸ್ ಗಢದಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದರ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಸಿಪಿಐ ಹೇಳಿದೆ.