ದೇಶ

ದೆಹಲಿ ಪಾಲಿಕೆ ಚುನಾವಣೆ: ಆಪ್ ಕಳಪೆ ಫಲಿತಾಂಶ; ಶಾಸಕ ಸ್ಥಾನಕ್ಕೆ ಅಲ್ಕಾ ಲಂಬಾ ರಾಜೀನಾಮೆ

Sumana Upadhyaya
ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಕಳಪೆ ಫಲಿತಾಂಶದಿಂದ ಬೇಸತ್ತು ಪಕ್ಷದ ಶಾಸಕಿ ಅಲ್ಕಾ ಲಂಬಾ ರಾಜೀನಾಮೆ ನೀಡಿದ್ದಾರೆ.
ತಮ್ಮ ಕ್ಷೇತ್ರವಾದ ಚಾಂದ್ನಿ ಚೌಕ್ ವಿಧಾನ ಸಭಾ ಕ್ಷೇತ್ರದ ಮೂರು ವಾರ್ಡುಗಳಲ್ಲಿ ಪಕ್ಷ ಹೀನಾಯವಾಗಿ ಸೋತಿದ್ದು ಅದರ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡು ಶಾಸಕಿ ಮತ್ತು ಪಕ್ಷದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡುವುದಾಗಿ ಅಲ್ಕಾ ಲಂಬಾ ಟ್ವೀಟ್ ಮಾಡಿದ್ದಾರೆ.
ಆದರೂ ತಾವು ಕೇಜ್ರಿವಾಲ್ ಅವರಿಗೆ ಬೆಂಬಲ ಮುಂದುವರಿಸಲಿದ್ದು ಪಕ್ಷದ ಶಕ್ತಿಗೆ ಎಲ್ಲಾ ರೀತಿಯಲ್ಲಿಯೂ ನೆರವು ನೀಡುವುದಾಗಿ ತಿಳಿಸಿದ್ದಾರೆ. 
ಲಂಬಾ ಅವರು ಪ್ರಸ್ತುತ ಪಕ್ಷದಲ್ಲಿ ಯಾವುದೇ ಪ್ರಮುಖ ಸ್ಥಾನ ಹೊಂದಿಲ್ಲ. ಪಕ್ಷದ ಅಧಿಕೃತ ವಕ್ತಾರ ಸ್ಥಾನದಿಂದ ತೆಗೆದುಹಾಕಲಾಗಿತ್ತು. 
SCROLL FOR NEXT