ದೇಶ

ಗೋ ಮೂತ್ರ ಕಾನೂನು ಅಧಿಕಾರಿಯೊಬ್ಬರಿಗೆ ನೆರವಾಯಿತು: ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ

Sumana Upadhyaya
ನವದೆಹಲಿ: ಗೋ ಮೂತ್ರ ಎಷ್ಟು ಪ್ರಯೋಜನಕಾರಿಯೆಂದರೆ ಸರ್ಕಾರದ ಮಾಜಿ ಕಾನೂನು ಅಧಿಕಾರಿಯೊಬ್ಬರು ಗಂಭೀರ ಕಾಯಿಲೆಯಿಂದ ಗುಣಮುಖರಾಗಿದ್ದಾರೆ ಎಂದು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ನಿನ್ನೆ ಲೋಕಸಭೆಯಲ್ಲಿ ಹೇಳಿದ್ದಾರೆ.
ಇತ್ತೀಚಿನ ವಿಧಾನಗಳನ್ನು ಬಳಸಿಕೊಂಡು ಹಸುಗಳು ಮತ್ತು ಜಾನುವಾರುಗಳಿಗೆ ಸಂಬಂಧಿಸಿದ ಪುರಾತನ ವಿಜ್ಞಾನವನ್ನು ಹರಡುವ ಬಗ್ಗೆ ಸರ್ಕಾರ ಯೋಜನೆ ಹಾಕಿಕೊಂಡಿದೆಯೇ ಎಂದು ತಿಳಿದುಕೊಳ್ಳಲು ಬಯಸುತ್ತಿರುವುದಾಗಿ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಲೇಖಿ,ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರು ನಿಯಮಿತವಾಗಿ ಗೋ ಮೂತ್ರ ಸೇವಿಸಿದಾಗ ಕಾಯಿಲೆ ಗುಣಮುಖವಾಯಿತು ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್, ಮದ್ದು ಎಂದರೆ ಮದ್ದು ಎಂದು ಹೇಳಿದರು.
 ಲೇಖಿ ಅವರ ಹೇಳಿಕೆಗೆ ಉತ್ತರಿಸಿದ ಕೃಷಿ ಸಚಿವ ರಾಧಾ ಮೋಹನ್ ಸಿಂಗ್, ರಾಷ್ಟ್ರೀಯ ಗೋಮಾಂಗ್ ಉತ್ಪಾದಕತೆ ಮಿಷನ್ ನಡಿಯಲ್ಲಿ  ಹರ್ಯಾಣದ ಕರ್ನಲ್ ನಲ್ಲಿ  ಜನೊಮ್ ಕೇಂದ್ರ ಸ್ಥಾಪನೆಯಾಗುತ್ತಿದೆ. ಇತ್ತೀಚಿನ ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
SCROLL FOR NEXT