ದೆಹಲಿ: ಮೊಮೊಸ್ ತಿಂದು 25 ಮಂದಿ ಅಸ್ವಸ್ಥ, ಇಬ್ಬರು ಮಕ್ಕಳ ಸ್ಥಿತಿ ಗಂಭೀರ
ಮೊಮೊಸ್ ಸೇವಿಸಿ 25 ಮಂದಿ ಅಸ್ವಸ್ಥರಾಗಿದ್ದು, ಇಬ್ಬರು ಮಕ್ಕಳು ಸ್ಥಿತಿ ಗಂಭೀರವಾಗಿರುವ ಘಟನೆ ದೆಹಲಿಯ ರಾಜ್ಪುರ್ ಖುರ್ದ್ ಗ್ರಾಮದಲ್ಲಿ ನಡೆದಿದೆ...
ನವದೆಹಲಿ: ಮೊಮೊಸ್ ಸೇವಿಸಿ 25 ಮಂದಿ ಅಸ್ವಸ್ಥರಾಗಿದ್ದು, ಇಬ್ಬರು ಮಕ್ಕಳು ಸ್ಥಿತಿ ಗಂಭೀರವಾಗಿರುವ ಘಟನೆ ದೆಹಲಿಯ ರಾಜ್ಪುರ್ ಖುರ್ದ್ ಗ್ರಾಮದಲ್ಲಿ ನಡೆದಿದೆ.
ದೆಹಲಿ ಪ್ರತಿಷ್ಠಿತ ರಸ್ತೆಯೊಂದರ ಹೋಟಲ್ ನಲ್ಲಿ ಮೆಮೊಸ್ ಗಳನ್ನು ನೀಡಲಾಗಿದೆ. ಈ ವೇಳೆ ಮೆಮೊಸ್ ಗಳನ್ನು ತಿಂದ 25 ಮಂದಿ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅಸ್ವಸ್ಥರಾದ ಜನರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದೀಗ 25 ಮಂದಿಯ ಪೈಕಿ ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಹೋಟೆಲ್ ಮಾಲೀಕನ ವಿರುದ್ಧ ಅಸ್ವಸ್ಥರ ಕುಟುಂಬಸ್ಥರು ಮೆಹ್ರಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.