ಆಸ್ಪತ್ರೆಗೆ ಆಮ್ಲಜನಕ ಪೂರೈಕೆ 
ದೇಶ

ಆಸ್ಪತ್ರೆ ಆಡಳಿತ ಮಂಡಳಿ, ಆಮ್ಲಜನಕ ಪೂರೈಕೆದಾರರ ಜಟಾಪಟಿಗೆ ಮಕ್ಕಳ ಬಲಿ!

ಉತ್ತರ ಪ್ರದೇಶದ ಗೋರಕ್ ಪುರದ ಬಿಆರ್ ಡಿ ಆಸ್ಪತ್ರೆಯಲ್ಲಿ ನಡೆದ ಮಕ್ಕಳ ಸರಣಿ ಸಾವು ದುರಂತಕ್ಕೆ ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಆಮ್ಲಜನಕ ಪೂರೈಕೆದಾರರ ನಡುವಿನ ಜಟಾಪಟಿಯೇ ಕಾರಣ ಎಂದು ಹೇಳಲಾಗುತ್ತಿದೆ.

ಲಖನೌ: ಉತ್ತರ ಪ್ರದೇಶದ ಗೋರಕ್ ಪುರದ ಬಿಆರ್ ಡಿ ಆಸ್ಪತ್ರೆಯಲ್ಲಿ ನಡೆದ ಮಕ್ಕಳ ಸರಣಿ ಸಾವು ದುರಂತಕ್ಕೆ ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಆಮ್ಲಜನಕ ಪೂರೈಕೆದಾರರ ನಡುವಿನ ಜಟಾಪಟಿಯೇ ಕಾರಣ ಎಂದು  ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಆಸ್ಪತ್ರೆಗೆ ಪ್ರತಿನಿತ್ಯ ಆಮ್ಲಜನಕ ಪೂರೈಕೆ ಮಾಡುತ್ತಿದ್ದ ಪೂರೈಕೆದಾರರು ಇತ್ತೀಚೆಗೆ ಆಸ್ಪತ್ರೆ ಆಡಳಿತ ಮಂಡಳಿ ಬಾಕಿ ಹಣ ನೀಡಿಲ್ಲವೆಂದು ಆರೋಪಿಸಿ ಆಮ್ಲಜನಕ ಪೂರೈಕೆ ಸ್ಥಗಿತಗೊಳಿಸಿದ್ದರು. ಇದೇ  ಕಾರಣಕ್ಕೆ ಮಕ್ಕಳ ಸರಣಿ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ವಿವಿಧ ಕಾಯಿಲೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳು ಆಮ್ಲಜನಕ ಕೊರತೆಯಿಂದಾಗಿ ಅಸು ನೀಗಿದ್ದಾರೆ. ಆಸ್ಪತ್ರೆ ಆಡಳಿತ ಮಂಡಳಿ ಸರ್ಕಾರಕ್ಕೆ  ನೀಡಿರುವ ವರದಿಯಂತೆ 30 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿ ನೀಡಿದೆ.

ಆದರೆ ನೈಜ ಅಂಕಿಅಂಶಗಳೇ ಬೇರೆ ಇದ್ದು, ಸರ್ಕಾರಕ್ಕೆ ಆಸ್ಪತ್ರೆ ನೀಡಿರುವ ಸಾವಿನ ಸಂಖ್ಯೆಗಿಂತ ನೈಜ ಅಂಕಿಗಳು ದುಪ್ಪಟ್ಟಾಗಿದ್ದು, ಪ್ರತ್ಯಕ್ಷ ದರ್ಶಿಗಳ ಪ್ರಕಾರ ಕಳೆದ 5 ದಿನಗಳ ಅವಧಿಯಲ್ಲಿ ಬರೊಬ್ಬರಿ 60 ಮಕ್ಕಳು  ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಗುರುವಾರ ಒಂದೇ ದಿನ ಸುಮಾರು 23 ಮಕ್ಕಳು ಸಾವನ್ನಪ್ಪಿದ್ದು, ಈ ಪೈಕಿ 10 ನವಜಾತ ಶಿಶುಗಳು ಕೂಡ ಸೇರಿವೆ ಎಂದು ತಿಳಿದುಬಂದಿದೆ. ಈ ವರ್ಷ ಮಕ್ಕಳಲ್ಲಿ ಮಿದುಳು ಸೋಂಕು  ಪ್ರಕರಣ ಹೆಚ್ಚಾಗಿದ್ದು, ಇಲ್ಲಿಯವರೆಗೆ 100ಕ್ಕೂ ಹೆಚ್ಚು ಮಕ್ಕಳು ಮಿದುಳು ನಂಜಿನಿಂದ (ಎನ್‌ಸೆಫಲಿಟಿಸ್‌) ಮೃತಪಟ್ಟಿದ್ದಾರೆ.  200ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಟಾಪಟಿಗೆ ಮಕ್ಕಳ ಬಲಿ!
ಇನ್ನು ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಮಾಡುತ್ತಿದ್ದ ಪೂರೈಕೆದಾರರಿಗೆ ಆಸ್ಪತ್ರೆ ಸುಮಾರು 70 ಲಕ್ಷ ಹಣವನ್ನು ಬಾಕಿ ಉಳಿಸಿಕೊಂಡಿತ್ತು. ಈ ಬಗ್ಗೆ ಪೂರೈಕೆದಾರರು ಆಸ್ಪತ್ರೆ ಆಡಳಿತ ಮಂಡಳಿಗೆ ಮನವಿ ಸಲ್ಲಿಕೆ ಮಾಡಿದ್ದರೂ ಬಾಕಿ  ಹಣ ಬಿಡುಗಡೆಯಾಗಿರಲಿಲ್ಲ. ಅಂತಿಮವಾಗಿ ಪೂರೈಕೆದಾರರು ಆಮ್ಲಜನಕ ಪೂರೈಕೆಯನ್ನು ಸ್ಥಗಿತಗೊಳಿಸಿದ್ದರು. ಆರಂಭದಲ್ಲಿ ಇದಕ್ಕೆ ಆಸ್ಪತ್ರೆ ಸಿಬ್ಬಂದಿ ತಲೆಕೆಡಿಸಿಕೊಂಡಿರಲಿಲ್ಲ. ಗುರುವಾರ ಮಕ್ಕಳ ಸರಣಿ ಸಾವಿನ ದುರಂತ  ನಡೆದ ಬಳಿಕ ಎಚ್ಚೆತ್ತುಕೊಂಡ ಆಸ್ಪತ್ರೆ ಆಡಳಿತ ಮಂಡಳಿ ಅದೇ ದಿನ ಪೂರೈಕೆದಾರರಿಗೆ 35 ಲಕ್ಷ ಹಣ ಬಾಕಿ ಪಾವತಿ ಮಾಡಿ ಆಮ್ಲಜನಕ ಪೂರೈಕೆ ಮಾಡುವಂತೆ ಸೂಚಿಸಿತ್ತು. ಆದರೆ ಆಸ್ಪತ್ರೆಗೆ ಆಮ್ಲಜನಕ ಪೂರೈಕೆಯಾಗುವ  ಹೊತ್ತಿಗೆ ದುರಂತ ಸಂಭವಿಸಿ ಹೋಗಿದೆ.

ಇದೊಂದೇ ಆಸ್ಪತ್ರೆಯಲ್ಲಿ ಸೋಂಕಿಗೆ ಚಿಕಿತ್ಸೆ!
ಈ ಭಾಗದಲ್ಲಿ ಮಕ್ಕಳ ಮೆದುಳು ಸೋಂಕಿಗೆ ಚಿಕಿತ್ಸೆ ನೀಡುವ ಆಸ್ಪತ್ರೆ ಇದೊಂದೇ ಆಗಿದ್ದು, ಇದೇ ಕಾರಣಕ್ಕೆ ಈ ಆಸ್ಪತ್ರೆಗೆ ಅಕ್ಕಪಕ್ಕದ ಜಿಲ್ಲೆ ಮಾತ್ರವಲ್ಲದೇ ಅಕ್ಕಪಕ್ಕದ ರಾಜ್ಯಗಳಿಂದಲೂ ರೋಗಿಗಳು ಬರುತ್ತಾರೆ. ನೆರೆಯ ಬಿಹಾರ  ಮತ್ತು ನೇಪಾಳದ ಮಕ್ಕಳು ಕೂಡ ಇಲ್ಲಿಗೆ ಬರುತ್ತಾರೆ. ಇಡೀ ಆಸ್ಪತ್ರೆಯ ವಾರ್ಡ್‌ಗಳು ಮಕ್ಕಳಿಂದ ತುಂಬಿ ತುಳುಕುತ್ತಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video