ಸುನಂದಾ ಪುಷ್ಕರ್, ಶಶಿ ತರೂರ್ ಮತ್ತು ಅರ್ನಬ್ ಗೋಸ್ವಾಮಿ 
ದೇಶ

ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ತರೂರ್ ಅವರನ್ನು ಖಂಡಿಸಿಲ್ಲ: ಅರ್ನಬ್ ಗೋಸ್ವಾಮಿ

ಸುನಂದಾ ಪುಷ್ಕರ್ ಅವರ ನಿಗೂಡ ಸಾವಿನ ಪ್ರಕರಣದಲ್ಲಿ ಸಂಸದ ಶಶಿ ತರೂರ್ ಅವರನ್ನು ಯಾವುದೇ ರೀತಿಯಲ್ಲಿ ಖಂಡಿಸಿಲ್ಲ ಎಂದು ರಿಪಬ್ಲಿಕ್ ಚಾನೆಲ್ ಮುಖ್ಯಸ್ಥ ...

ನವದೆಹಲಿ: ಸುನಂದಾ ಪುಷ್ಕರ್ ಅವರ ನಿಗೂಡ ಸಾವಿನ ಪ್ರಕರಣದಲ್ಲಿ ಸಂಸದ ಶಶಿ ತರೂರ್ ಅವರನ್ನು ಯಾವುದೇ ರೀತಿಯಲ್ಲಿ ಖಂಡಿಸಿಲ್ಲ ಎಂದು ರಿಪಬ್ಲಿಕ್ ಚಾನೆಲ್ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ದೆಹಲಿ ಹೈಕೋರ್ಟ್ ಗೆ ಹೇಳಿದ್ದಾರೆ.
ಸುನಂದಾ ಸಾವಿನ ಕೇಸ್ ನಲ್ಲಿ ಶಶಿ ತರೂರ್ ಭಾಗಿಯಾಗಿದ್ದಾರೆ ಎನ್ನುವ ರೀತಿ ನಾವು ಹೇಳಿಲ್ಲ ಎಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಮನಮೋಹನ್ ಅವರ ಮುಂದೆ ಅರ್ನಬ್ ಹೇಳಿಕೆ ನೀಡಿದ್ದಾರೆ. ರಿಪಬ್ಲಿಕ್ ಚಾನೆಲ್ ನನ್ನನ್ನು ಹೆಂಡತಿಯ ಕೊಲೆಗಾರ ಎನ್ನುವ ರೀತಿ ಬಿಂಬಿಸಿತ್ತು ಎಂದು ಶಶಿತರೂರ್ ಆರೋಪಿಸಿದ್ದರು.
ಅರ್ನಬ್ ಗೋಸ್ವಾಮಿ ಮತ್ತು ರಿಪಬ್ಲಿಕ್ ಚಾನೆಲ್ ಸಾವಿನ ಸಂಬಂಧ ವರದಿ ಮಾಡುವಾಗ ಎಚ್ಚರಿಕೆ ವಹಿಸುತ್ತದೆ.  ಸುನಂದಾ ಪುಷ್ಕರ್ ಅವರ ನಿಗೂಢ ಸಾವಿನಲ್ಲಿ ತರೂರ್ ಭಾಗಿಯಾಗಿದ್ದಾರೆಂಬ ರೀತಿಯಲ್ಲಿ ನಾವು ವರದಿ ಮಾಡಿಲ್ಲ ಎಂದು ಹೇಳಿರುವುದಾಗಿ ಅರ್ನಬ್ ಪರ ವಕೀಲ ರಜತ್ ಪ್ರಧಾನ್ ಹೇಳಿದ್ದಾರೆ.
ಸುನಂದ ಪುಷ್ಕರ್ ಸಾವಿಗೆ ಸಂಬಂಧಪಟ್ಟಂತೆ ತಮ್ಮ ವಿರುದ್ಧ ಮಾನನಷ್ಟಕಾರಿ ವರದಿಗಳನ್ನು ಪ್ರಕಟಿಸದಂತೆ ರಿಪಬ್ಲಿಕ್ ಚಾನಲ್ ಗೆ ನಿರ್ಬಂಧ ವಿಧಿಸಬೇಕೆಂದು ಶಶಿ ತರೂರ್ ದೆಹಲಿ ಕೋರ್ಟ್ ಮೊರೆ ಹೋಗಿದ್ದರು. ಜೊತೆಗೆ  2ಕೋಟಿ ರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಸಂಬಂಧ ದೆಲಿ ಹೈಕೋರ್ಟ್ ಅರ್ನಬ್ ಗೋಸ್ವಾಮಿ ಮತ್ತು ಚಾನೆಲ್ ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ