1993, ಮುಂಬೈ ಡಾಳಿಯ ಓರ್ವ ಆರೋಪಿ ಅಬು ಸಲೀಂ
ಮುಂಬೈ: ವಿಶೇಷ ಟಾಡಾ ನ್ಯಾಯಾಲಯ , ಮಂಗಳವಾರ 1993 ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಬು ಸಲೀಂ ಮತ್ತು ಐದು ಅಪರಾಧಿಗಳ ಶಿಕ್ಷೆ ದಿನಾಂಕವನ್ನು ನಿಗದಿ ಪಡಿಸಲಿದೆ.
ಮುಂಬೈ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿ, ಮುಸ್ತಫಾ ದೋಸಾ, ಅಬು ಸೇಲಂ, ಕರಿಮುಲ್ಲಾ ಖಾನ್, ಫಿರೋಜ್ ಅಬ್ದುಲ್ ರಶೀದ್ ಖಾನ್, ರಿಯಾಜ್ ಸಿದ್ದಿಕಿ ಮತ್ತು ತಾಹಿರ್ ಮರ್ಚೆಂಟ್ ನನ್ನು ಟಾಡಾ ನ್ಯಾಯಾಲಯ 16 ಜೂನ್ 2017 ರಂದು ಅಪರಾಧಿಗಳೆಂದು ಘೋಷಣೆ ಮಾಡಿದೆ ಮತ್ತು ಏಳನೇ ಆರೋಪಿ ಅಬ್ದುಲ್ ಕ್ವಾಯಂನನ್ನು ಖುಲಾಸೆಗೊಳಿಸಿದೆ. ಅವರಲ್ಲಿ ಓರ್ವಾನಾದ ಮುಸ್ತಫಾ ದೋಸಾ 28 ಜೂನ್ 2017 ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದನು.
ಶಿಕ್ಷೆಯ ಪರಿಮಾಣದ ಮೇಲಿನ ವಾದಗಳು ಮತ್ತು ವಿಚಾರಣೆಯನ್ನು ಆಗಸ್ಟ್ 10 ರಂದು ಮುಕ್ತಾಯಗೊಂಡಿತ್ತು. ಇಂದು ಶಿಕ್ಷೆ ವಿಧಿಸುವ ದಿನಾಂಕವನ್ನು ನ್ಯಾಯಾಲಯವು ನಿಗದಿಪಡಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಎಲ್ಲಾ ಆರೋಪಿಗಳು ಅಪರಾಧ ಪಿತೂರಿ, ಭಾರತ ಸರ್ಕಾರದ ವಿರುದ್ಧ ಯುದ್ಧ ನಡೆಸುವ ಮತ್ತು ಕೊಲೆ ಸೇರಿ ಅನೇಕ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅಪರಾಧಿಗಳು ಕಾನೂನಿಗೆ ಅನುಗುಣವಾಗಿ ಗರಿಷ್ಠ ಶಿಕ್ಷೆಯನ್ನು ಕೋರಲಾಗಿದೆ ಎಂದು ಕಳೆದ ಜೂನ್ ನಲ್ಲಿ ನ್ಯಾಯಾಲಯ ತಿಳಿಸಿತ್ತು.]
ಮಾರ್ಚ್ 12, 1993 ರ ಮುಂಬಯಿ ಸ್ಫೋಟವು 257 ಸಾವುಗಳಿಗೆ ಕಾರಣಾವಾಗಿತ್ತು ಮತ್ತು 700 ಕ್ಕಿಂತ ಹೆಚ್ಚು ಜನರು ಗಾಯಗೊಂಡರು. ದಾವೂದ್ ಇಬ್ರಾಹಿಂ, ಪಾಕಿಸ್ತಾನ ಮೂಲದ ಭೂಗತ ಪಾತಕಿ ಮತ್ತು ಭಾರತದ 'ಮೋಸ್ಟ್ ವಾಂಟೆಡ್' ಸೇರಿ ಈ ದಾಳಿಗಳನ್ನು ಯೋಜಿಸಿದ್ದರು. ಇವರು ಅಮೆರಿಕ ಮತ್ತು ಇಂಟರ್ ಪೋಲ್ ನ 'ಮೋಸ್ಟ್ ವಾಂಟೆಡ್' ಪಟ್ಟಿಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದಾರೆ.