ಸಂಗ್ರಹ ಚಿತ್ರ 
ದೇಶ

ಅನುಯಾಯಿಗಳೊಂದಿಗೆ ಸೇರಿಕೊಂಡಿದ್ದ ದುಷ್ಕರ್ಮಿಗಳಿಂದ ಹಿಂಸಾಚಾರ: ಸಿಎಂ ಖಟ್ಟರ್ ಟ್ವಿಸ್ಟ್

ಶುಕ್ರವಾರ ಪಂಚಕುಲದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಹೊಸದೊಂದು ಟ್ವಿಸ್ಟ್ ನೀಡಿದ್ದು, ಹಿಂಸಾಚಾರ ನಡೆಸಿದ್ದು, ಬಾಬಾ ಅನುಯಾಯಿಗಳಲ್ಲ..ಅವರೊಂದಿಗೆ ಸೇರಿಕೊಂಡಿದ್ದ ದುಷ್ಕರ್ಮಿಗಳು ಎಂದು ಹೇಳಿದ್ದಾರೆ.

ಚಂಡೀಘಡ: ಶುಕ್ರವಾರ ಪಂಚಕುಲದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಹೊಸದೊಂದು ಟ್ವಿಸ್ಟ್ ನೀಡಿದ್ದು, ಹಿಂಸಾಚಾರ ನಡೆಸಿದ್ದು, ಬಾಬಾ  ಅನುಯಾಯಿಗಳಲ್ಲ..ಅವರೊಂದಿಗೆ ಸೇರಿಕೊಂಡಿದ್ದ ದುಷ್ಕರ್ಮಿಗಳು ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮನೋಹರ್ ಲಾಲ್ ಖಟ್ಟರ್ ಅವರು, ಬಾಬಾ ಅನುಯಾಯಿಗಳ ಜೊತೆ ಸೇರಿಕೊಂಡಿದ್ದ ದುಷ್ಕರ್ಮಿಗಳಿಂದಲೇ ಹಿಂಸಾಚಾರ ಸಂಭವಿಸಿದೆ ಎಂದು ಹೇಳುವ ಮೂಲಕ ಮತ್ತೊಂದು  ವಿವಾದಕ್ಕೆ ಕಾರಣರಾಗಿದ್ದಾರೆ. ಅಂತೆಯೇ ಭಕ್ತರ ಸೋಗಿನಲ್ಲಿ ಹಿಂಸಾಚಾರ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೆಲ ಸಮಾಜ ವಿದ್ರೋಹ ಶಕ್ತಿಗಳು ಬಾಬಾ ಭಕ್ತರ ಗುಂಪಿನಲ್ಲಿ ಸೇರಿಕೊಂಡು ದಾಳಿ ಮಾಡಿದ್ದರಿಂದಲೇ ಹಿಂಸಾಚಾರ ನಡೆದಿದ್ದು, ಶಾಂತಿಗೆ ಭಂಗ ತಂದಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ತಪ್ಪಿತಸ್ಥರನ್ನು ಗುರುತಿಸಿ  ಶೀಘ್ರದಲ್ಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂಧು ಖಟ್ಟರ್ ಹೇಳಿದ್ದಾರೆ.

ಖಟ್ಟರ್ ಈ ಮಾತು ಇದೀಗ ವಿವಾದಕ್ಕೆ ಕಾರಣವಾಗಿದ್ದು, ಪ್ರತಿಪಕ್ಷಗಳು ಹರ್ಯಾಣ ಬಿಜೆಪಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿವೆ. ತೀರ್ಪು ಹೊರ ಬೀಳುತ್ತಿದೆ ಎಂಬ ವಿಚಾರ ತಿಳಿದು ಲಕ್ಷಾಂತರ ಮಂದಿ ಕೋರ್ಟ್  ಆವರಣ ಪ್ರವೇಶಿಸಿದ್ದಾರೆ. ಇವರನ್ನು ಮೊದಲೇ ತಡೆದಿದ್ದರೆ ಹಿಂಸಾಚಾರ ತಡೆಯಬಹುದಿತ್ತಲ್ಲವೇ ಎಂದು ವಿಪಕ್ಷಗಳು ಸರ್ಕಾರದ ವಿರುದ್ಧ ಕೆಂಡಕಾರಿವೆ. ನಿನ್ನೆ ಪಂಚಕುಲದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ಬಾಬಾ ರಾಮ್  ರಹೀಮ್ ರನ್ನು ದೋಷಿ ಎಂದು ತೀರ್ಪು ನೀಡಿದ ಬೆನ್ನಲ್ಲೇ ಕೋರ್ಟ್ ಆವರಣದಲ್ಲಿ ನೆರೆದಿದ್ದ ಲಕ್ಷಾಂತರ ಭಕ್ತರು ಹಿಂಸಾಚಾರಕ್ಕೆ ಇಳಿದಿದ್ದರು. ಈ ವೇಳೆ ನೂರಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಘಟನೆಯಲ್ಲಿ 32 ಮಂದಿ ಅಸು  ನೀಗಿದ್ದರು. ಅಂತೆಯೇ 250ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್