ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸ್ವಯಂ ಘೋಷಿತ ದೇವಮಾನವ ಡೇರಾ ಸಚ್ಚಾ ಸೌದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರ ಬ್ಯಾಗ್ ಅನ್ನು ಹೊತ್ತೊಯ್ದ ಹರಿಯಾಣದ ಡೆಪ್ಯುಟಿ ಅಡ್ವೋಕೇಟ್ ಜನರಲ್ ಗುರುದಾಸ್ ಸಿಂಗ್ ಅವರನ್ನು ಹರಿಯಾಣ ಸರ್ಕಾರ ಶನಿವಾರ ವಜಾಗೊಳಿಸಿ ಆದೇಶ ಹೊರಡಿಸಿದೆ.
ನಿನ್ನೆ ತೀರ್ಪು ಪ್ರಕಟಿಸುವ ಮುನ್ನ ರಾಮ್ ರಹೀಮ್ ಸಿಂಗ್ ಅವರೊಂದಿಗೆ ಪಂಚಕುಲ ಸಿಬಿಐ ವಿಶೇಷ ಕೋರ್ಟ್ ಆವರಣಕ್ಕೆ ಆಗಮಿಸಿದ್ದ ಗುರುದಾಸ್ ಸಿಂಗ್ ಅವರು ಬಾಬಾರ ಬ್ಯಾಗ್ ಹೊತ್ತೊಯ್ದ ದೃಶ್ಯ ಇಂದು ಮಾಧ್ಯಮಗಳಲ್ಲಿ ಪ್ರಸಾರವಾಗಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಹರಿಯಾಣ ಸರ್ಕಾರ ಅವರನ್ನು ಡೆಪ್ಯುಟಿ ಅಡ್ವೋಕೇಟ್ ಜನರಲ್ ಹುದ್ದೆಯಿಂದ ವಜಾಗೊಳಿಸಿದೆ.
ಇನ್ನು 32 ಮಂದಿಯನ್ನು ಬಲಿ ಪಡೆದ ಪಂಚಕುಲ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಸರ್ಕಾರ ಪಂಚಕುಲ ಡಿಸಿಪಿಯನ್ನು ಸಹ ಸೇವೆಯಿಂದ ಅಮಾನತುಗೊಳಿಸಿದೆ.