10 ಕೆಜಿ ಸಜೀವ ಬಾಂಬ್ ಹೊತ್ತು 1 ಕಿ.ಮೀ ಓಡಿ 400 ಮಕ್ಕಳ ಜೀವ ಉಳಿಸಿದ ಧೀರ!
ಭೋಪಾಲ್: ಮಕ್ಕಳ ಜೀವ ಉಳಿಸುವ ಸಲುವಾಗಿ ಶಾಲಾ ಆವರಣದಲ್ಲಿ ಪತ್ತೆಯಾಗಿದ್ದ 10 ಕೆಜಿ ತೂಕದ ಬಾಂಬ್ ವೊಂದನ್ನು ಹೊತ್ತುಕೊಂಡು ತಮ್ಮ ಜೀವಕ್ಕೆ ಹೆದರದೆ 1 ಕಿಮೀ ದೂರದವರೆಗೂ ಓಡಿ ಪೊಲೀಸ್ ಪೇದೆಯೊಬ್ಬರು ಸಾಹಸ ಮೆರೆದಿರುವ ಘಟನೆಯೊಂದು ಮಧ್ಯಪ್ರದೇಶದ ಸಾಗರ ಜಿಲ್ಲೆಯ ಚಿಟೊರಾದಲ್ಲಿ ನಡೆದಿದೆ.
ಅಭಿಷೇಕ್ ಪಟೇಲ್ 400 ಶಾಲಾ ಮಕ್ಕಳ ಜೀವ ಉಳಿಸಿದ ಧೀರ ಪೊಲೀಸ್ ಪೇದೆಯಾಗಿದ್ದಾರೆ. ಅಭಿಷೇಕ್ ಅವರು ಸಜೀವ ಬಾಂಬ್ ನ್ನು ಹೆಗಲ ಮೇಲೆ ಹೊತ್ತುಕೊಂಡು ಓಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶುಕ್ರವಾಹ ಬೆಳಿಗ್ಗೆ ಶಾಲಾ ಆವರಣದಲ್ಲಿ ಸಜೀವ ಬಾಂಬ್ ವೊಂದು ಪತ್ತೆಯಾಗಿತ್ತು. ಇದನ್ನು ಕಂಡ ಶಾಲಾ ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರೂ. ಕೂಡಲೇ ಸ್ಥಳಕ್ಕಾಮಿಸಿದ ಅಭಿಷೇಕ್ ಅವರು ಮಕ್ಕಳನ್ನು ಹೊರಗೆ ಕಳುಹಿಸಿ ಶಾಲೆಗೆ ಬೀಗ ಹಾರಿಸಿದ್ದರು. ನಂತರ ಹಿಂದೂ ಮುಂದೂ ಆಲೋಚನೆ ಮಾಡದೆ, ಮಕ್ಕಳ ಜೀವವನ್ನು ಉಳಿಸುವ ಸಲುವಾಗಿ ಅಭಿಷೇಕ್ ಅವರು ಬಾಂಬ್ ನ್ನು ಹೆಗಲ ಮೇಲೆ ಹೊತ್ತುಕೊಂಡು ದೂರಕ್ಕೆ ಓಡಿದರು. ಒಂದು ವೇಳೆ ಬಾಂಬ್ ಸ್ಥಳದಲ್ಲಿ ಸ್ಫೋಟಗೊಂಡಿದ್ದರೆ 500 ಮೀಟರ್ ವ್ಯಾಪ್ತಿಯಲ್ಲಿ ಹಾನಿ ಉಂಟಾಗುವ ಸಾಧ್ಯತೆಗಳಿರುತ್ತಿತ್ತು. ಅಲ್ಲದೆ, ಸ್ಥಳದಲ್ಲಿ 400ಕ್ಕೂ ಹೆಚ್ಚು ಶಾಲಾ ಮಕ್ಕಳ ಪ್ರಾಣ ಹಾನಿ ಸಂಭವಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮದ ಬಳಿಯೇ ಸೇನೆಪಡೆಗಳಿದ್ದವು. ಬಾಂಬ್ ಕುರಿತಂತೆ ಸೇನೆಗೆ ಮಾಹಿತಿ ನೀಡಲಾಗಿತ್ತು. ಸ್ಥಳದಲ್ಲಿ ಬಾಂಬ್ ಇರಿಸಿದ್ದು ಯಾರು, ಪ್ರಕರಣದ ಹಿಂದೆ ಯಾರ ಕೈವಾಡವಿದೆ ಎಂಬುದರ ಕುರಿತಂತೆ ತನಿಖೆ ನಡೆಸಲಾಗುತ್ತಿದೆ. ಬಾಂಬ್ ನಿಷ್ಟ್ರಿಯ ದಳದ ಅಧಿಕಾರಿಗಳು ಬಾಂಬ್ ನ್ನು ನಿಷ್ಕ್ರಿಯಗೊಳಿಸಿದ್ದಾರೆ. ಬಾಂಬ್ ಸ್ಫೋಟದಿಂದ ಉಂಟಾಗುತ್ತಿದ್ದ ಭಾರೀ ಅನಾಹುತವನ್ನು ತಪ್ಪಿಸಿದ ಮುಖ್ಯಪೇದೆ ಅಭಿಷೇಕ್ ಪಟೇಲ್ ಅವರಿಗೆ ಬಹುಮಾನ ನೀಡಲಾಗುತ್ತದೆ ಎಂದು ಐಜಿಸಿ ಸತೀಶ್ ಸಕ್ಸೇನಾ ಅವರು ಘೋಷಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics