ಬನಸ್ಕಾಂತ್: ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಸೇರಿದ್ದ ಅಲ್ಪೇಶ್ ಠಾಕೂರ್ ಪ್ರಧಾನಿ ನರೇಂದ್ರ ಮೋದಿ ಅವರು ಬೆಳ್ಳಾಗಿರುವುದರ ಹಿಂದಿಕ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
ಅಲ್ಪೇಶ್ ಠಾಕೂರ್ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಪ್ರತಿ ತಿಂಗಳಿಗೆ 1.2 ಕೋಟಿ ರೂಪಾಯಿ ಮೌಲ್ಯದ ಅಣಬೆ ಸೇವಿಸುವುದರಿಂದ ಬೆಳ್ಳಗಿದ್ದಾರಂತೆ. ಪ್ರಧಾನಿ ನರೇಂದ್ರ ಮೋದಿ ಸೇವಿಸುವ ಅಣಬೆಯ ಒಂದು ಪೀಸ್ ಗೆ 80,000 ರೂಪಾಯಿ ಖರ್ಚಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ಏನನ್ನು ಸೇವಿಸುತ್ತಾರೋ ಅದನ್ನು ಬಡವರು ಸೇವಿಸಲು ಸಾಧ್ಯವಿಲ್ಲ ಎಂದು ಯಾರೋ ಒಬ್ಬರು ಹೇಳಿದರು ಎಂದು ಗುಜರಾತ್ ನ ವಡ್ಗಾಂ ನಲ್ಲಿ ಕಾಂಗ್ರೆಸ್ ಸಮಾವೇಶವನ್ನುದ್ದೇಶಿಸಿ ಮಾತನಾಡಿರುವ ಅಲ್ಪೇಶ್ ಠಾಕೂರ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಥೈವಾನ್ ನಲ್ಲಿ ಸಿಗುವ ವಿಶೇಷವಾದ ಅಣಬೆಯನ್ನು ಸೇವಿಸುತ್ತಾರೆ. ಪ್ರಧಾನಿ ಮೋದಿ ಹಿಂದೆ ನಮ್ಮೆಲ್ಲರಂತೆಯೇ ಇದ್ದರು, 2001 ರಲ್ಲಿ ಗುಜರಾತ್ ನ ಮುಖ್ಯಮಂತ್ರಿಯಾದ ಬಳಿಕ ನರೇಂದ್ರ ಮೋದಿ ಅವರು ಅಣಬೆ ತಿನ್ನಲು ಪ್ರಾರಂಭಿಸಿದರು. ಆಗಿನಿಂದ ಅವರು ಬೆಳ್ಳಗಾಗಿದ್ದಾರೆ, ಇದಕ್ಕಾಗಿ ಪ್ರತಿ ತಿಂಗಳಿಗೆ 1.20 ಕೋಟಿ ರೂಪಾಯಿ ಖರ್ಚು ಮಾಡುತ್ತಾರೆ, ಇನ್ನು ಅವರ ಕೆಲಸದವರು ಎಷ್ಟು ಕೋಟಿ ರೂಪಾಯಿಗಳನ್ನು ತಿನ್ನುತ್ತಾರೆ ಎಂಬುದನ್ನು ನೀವೇ ಊಹಿಸಿಕೊಳ್ಳಿ ಎಂದು ಅಲ್ಪೇಶ್ ಠಾಕೂರ್ ಹೇಳಿದ್ದಾರೆ.