ದೇಶ

ಗುಜರಾತ್ ನ 6 ಬೂತ್ ಗಳಲ್ಲಿ ಮರುಮತದಾನ ಆರಂಭ

Srinivasamurthy VN
ಅಹ್ಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯ ನಿಮಿತ್ತ ಭಾನುವಾರ 6 ಬೂತ್ ಗಳಲ್ಲಿ ಮರುಮತದಾನ ಆರಂಭವಾಗಿದೆ.
ಈ ಹಿಂದೆ ನಡೆದ ಮತದಾನ ವೇಳೆ ಮತಯಂತ್ರಗಳಲ್ಲಿ ದೋಷಕಂಡು ಬಂದು ಮತದಾನ ಅಸ್ಥವ್ಯಸ್ಥವಾಗಿತ್ತು. ಈ ಹಿನ್ನಲೆಯಲ್ಲಿ ನಿನ್ನೆಯಷ್ಟೇ ಚುನಾವಣಾ ಆಯೋಗ ಇಂದು ಮರುಮತದಾನ ಘೋಷಣೆ ಮಾಡಿತ್ತು. ಅದರಂತೆ  ಇಂದು 6 ಬೂತ್ ಗಳಲ್ಲಿ ಮರುಮತದಾನ ಆರಂಭಿಸಲಾಗಿದೆ. ಗುಜರಾತ್ ನ ವಿರಂಗಾಮ್, ಸಾವ್ಲಿ ವಿಧಾನಸಭಾ ಕ್ಷೇತ್ರದ ತಲಾ ಎರಡು ಬೂತ್ ಗಳು ಮತ್ತು ವಡ್ಗಾಮ್ ಮತ್ತು ಡಸ್ಕ್ರೋಯ್ ನ ತಲಾ ಒಂದು ಬೂತ್ ಗಳಲ್ಲಿ ಮತದಾನ  ಆರಂಭವಾಗಲಿದೆ.
ನಾಳೆ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. 
ಮತದಾನ ಅಂತ್ಯವಾಗುತ್ತಿದ್ದಂತೆಯೇ ಬಹಿರಂಗವಾಗಿದ್ದ ಚುನವಣೋತ್ತರ ಸಮೀಕ್ಷೆಗಳು ಎರಡೂ ರಾಜ್ಯಗಳಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎಂದು ವರದಿ ನೀಡಿದ್ದವು,
SCROLL FOR NEXT