ಸಂಗ್ರಹ ಚಿತ್ರ 
ದೇಶ

ಗುಜರಾತ್ ಸೋಲಿನ ನಡುವೆಯೂ ಕಾಂಗ್ರೆಸ್ ಬಲ ಹೆಚ್ಚಿಸಿದ ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿ ಗೆಲುವು!

ಇಡೀ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಆಭ್ಯರ್ಥಿಗಳು ಎಂದೇ ಗುರುತಿಸಿಕೊಂಡಿದ್ದ ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿ ನಿರೀಕ್ಷೆ ಮೀರಿ ಗೆಲುವು ದಾಖಲಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಗುಜರಾತ್ ನಲ್ಲಿ ಮತ್ತಷ್ಟು ಬಲ ತಂದಿದ್ದಾರೆ.

ಅಹ್ಮದಾಬಾದ್: ಇಡೀ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಆಭ್ಯರ್ಥಿಗಳು ಎಂದೇ ಗುರುತಿಸಿಕೊಂಡಿದ್ದ ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿ ನಿರೀಕ್ಷೆ ಮೀರಿ ಗೆಲುವು ದಾಖಲಿಸುವ ಮೂಲಕ  ಕಾಂಗ್ರೆಸ್ ಪಕ್ಷಕ್ಕೆ ಗುಜರಾತ್ ನಲ್ಲಿ ಮತ್ತಷ್ಟು ಬಲ ತಂದಿದ್ದಾರೆ.
ಗುಜರಾತ್ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದ್ದ ವಡಗಾಮ್ ನಲ್ಲಿ ಸ್ಪರ್ಧಿಸಿದ್ದ ಜಿಗ್ನೇಶ್ ಮೇವಾನಿ ಬನಸ್ಕಂತಾ ಜಿಲ್ಲೆಯ ವಡಗಾಮ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕೋಮವಾದ ಮತ್ತು  ಬಿಜೆಪಿ ವಿರುದ್ಧ ಮಾತನಾಡುವ ಮೂಲಕವೇ ಸುದ್ದಿಗೆ ಗ್ರಾಸವಾಗಿದ್ದ ಮೇವಾನಿ, ಇತ್ತೀಚೆಗೆ ಬೆಂಗಳೂರಿನಲ್ಲಿ ಹತ್ಯೆಗೆ ಗುರಿಯಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧ ನಡೆದಿದ್ದ ಹೋರಾಟದಲ್ಲಿ ಕಾಣಿಸಿಕೊಂಡು ವ್ಯಾಪಕ  ಸುದ್ದಿಗೆ ಗ್ರಾಸವಾಗಿದ್ದರು ಅಲ್ಲದೆ ಅವರ ಹೇಳಿಕೆಗಳೂ ಕೂಡ ವಿವಾದದ ಸ್ವರೂಪ ಪಡೆದಿದ್ದವು. 
ಇದೇ ಬಿಸಿಯಲ್ಲಿ ಗುಜರಾತ್ ಚುನಾವಣೆ ಕೂಡ ಘೋಷಣೆಯಾಗಿತ್ತು. ಈ ವೇಳೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿಗ್ನೇಶ್ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದ್ದು, ಮೇವಾನಿ ಒಟ್ಟು 63,172 ಮತಗಳನ್ನು ಪಡೆದಿದ್ದು,  ಬಿಜೆಪಿಯ --- ಅವರನ್ನು 21042 ಮತಗಳ ಅಂತರದಿಂದ ಭರ್ಜರಿಯಾಗಿ ಮಣಿಸಿದ್ದಾರೆ. ದಲಿತ ಮತ್ತು ಇತರೆ ಹಿಂದುಳಿದ ಮತಗಳನ್ನು ಆಕರ್ಷಿಸುವಲ್ಲಿ ಜಿಗ್ನೇಶ್ ಮೇವಾನಿ ಯಶಸ್ವಿಯಾಗಿದ್ದಾರೆ ಎಂದು ತಜ್ಞರು  ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಕಾಂಗ್ರೆಸ್ ಪಕ್ಷದ ಮತ್ತೋರ್ವ ಪ್ರಮುಖ ಸ್ಪರ್ಧಿ ಅಲ್ಪೇಶ್ ಠಾಕೂರ್ ಕೂಡ ರಾಧನ್ ಕ್ಷೇತ್ರದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದು, ಈ ಕ್ಷೇತ್ರದಲ್ಲಿ ಅಲ್ಪೇಶ್ ಒಟ್ಟು 63,172 ಮತಗಳನ್ನು ಪಡೆದಿದ್ದಾರೆ. ಅಂತೆಯೇ ತಮ್ಮ ಪ್ರತಿಸ್ಪರ್ಧಿ  ಬಿಜೆಪಿಯ ಸೋಲಂಕಿ ಲಾವಿಂಗ್ಜಿ ಮುಲ್ಜಿಜಿ ಠಾಕೂರ್ ಅವರನ್ನು 13235 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.
ಒಟ್ಟಾರೆ ಕಾಂಗ್ರೆಸ್ ಪಕ್ಷದ ಅಸ್ತಿತ್ವದ ಪ್ರಶ್ನೆಯಾಗಿದ್ದ ಈ ಎರಡೂ ಕ್ಷೇತ್ರಗಳಲ್ಲೂ ಕೈ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ತಂದತ್ತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್