ದೇಶ

ರೋಹಿಣಿ ಅಶ್ರಮದ ಡೋಂಗಿ ಬಾಬಾನನ್ನು ಹುಡುಕಿ: ಸಿಬಿಐಗೆ ಹೈಕೋರ್ಟ್ ಸೂಚನೆ!

Srinivasamurthy VN
ನವದೆಹಲಿ: 40 ಮಹಿಳೆಯರನ್ನು ತನ್ನ ಆಶ್ರಮದಲ್ಲಿ ಬಂಧಿಯಾಗಿಟ್ಟುಕೊಂಡು ಲೈಂಗಿಕ ದೌರ್ಜನ್ಯ ನಡೆಸಿದ್ದ ಕಾಮಿಸ್ವಾಮಿಯನ್ನು ಕೂಡಲೇ ವಶಕ್ಕೆ ಪಡೆಯುವಂತೆ ದೆಹಲಿ ಹೈಕೋರ್ಟ್ ಸಿಬಿಐ ಅಧಿಕಾರಿಗಳಿಗೆ ಶುಕ್ರವಾರ ಸೂಚನೆ ನೀಡಿದೆ.
ದೆಹಲಿಯ ರೋಹಿಣಿ ಆಶ್ರಮದ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಇತ್ತೀಚೆಗೆ 40 ಮಂದಿ ಮಹಿಳೆಯರನ್ನು ಬಿಡುಗಡೆ ಮಾಡಿದ್ದರು. ಈ ವೇಳೆ ತನಿಖಾಧಿಕಾರಿಗಳಿಗೆ ಕಾಮಿಸ್ವಾಮಿ ವೀರೇಂದ್ರ ದೀಕ್ಷಿತ್ ನ ಕುರಿತ ಸ್ಫೋಟಕ  ಮಾಹಿತಿ ಲಭ್ಯವಾಗಿದ್ದು, ಈ ಕಾಮಿಸ್ವಾಮಿ 16 ಸಾವಿರ ಮಹಿಳೆಯರೊಂದಿಗೆ ಹಾಸಿಗೆ ಹಂಚಿಕೊಳ್ಳಬೇಕು ಎಂದು ಬಯಸಿದ್ದನಂತೆ. ಈ ಬಗ್ಗೆ ಸ್ವತಃ ಆತನ ವಶದಲ್ಲಿದ್ದು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು  ಅಧಿಕಾರಿಗಳೊಂದಿಗೆ ಮಾಹಿತಿ ನೀಡಿದ್ದು, ಇದೀಗ ಕಾಮಿಸ್ವಾಮಿ ನಾಪತ್ತೆಯಾಗಿದ್ದು ಆತನ ಬಂಧನಕ್ಕಾಗಿ ಪೊಲೀಸ್ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಹೈಕೋರ್ಟ್ ತನಿಖಾ ಆಯೋಗವನ್ನು ರಚನೆ ಮಾಡಿದ್ದು, ರೋಹಿಣಿ ಆಶ್ರಮದ ಕುರಿತು ಕೂಲಂಕುಷ ತನಿಖೆ ನಡೆಸುವಂತೆ ಆದೇಶ ನೀಡಿದೆ.  ಅಲ್ಲದೆ ಕೂಡಲೇ  ತಂಡವನ್ನು ರಚನೆ ಮಾಡಿ ಈ ಡೋಂಗಿ ಬಾಬಾನನ್ನು ಹುಡುಕಿ ವಶಕ್ಕೆ ಪಡೆಯುವಂತೆ ಸೂಚನೆ ನೀಡಿದೆ.
SCROLL FOR NEXT