ದೇಶ

ಮುಸ್ಲಿಂ ಮಹಿಳೆಯರಿಗೆ ಇಂದು ಈದ್ ಗಿಂತ ಶ್ರೇಷ್ಠ ದಿನ: ತಲಾಕ್ ಸಂತ್ರಸ್ತೆ

Raghavendra Adiga
ನವದೆಹಲಿ: ಸಂಸತ್ತಿನಲ್ಲಿ ತ್ರಿವಳಿ ತಲಾಕ್ ಮಸೂದೆಯನ್ನು ಕಾಂಗ್ರೆಸ್ ಬೆಂಬಲಿಸಲಿದೆ, ಆದರೆ ಮಸೂದೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಸಂಬಂಧ ಕಾನೂನನ್ನು ಜಾರಿಗೆ ತರಲು ತಮ್ಮ ಕೆಲವು ಸಲಹೆಗಳು ಇದೆ ಎಂದಿದೆ. ತ್ರಿವಳಿ ತಲಾಖ್ ವಿರುದ್ಧ ಪ್ರಸ್ತಾವಿತ ಮಸೂದೆಯು ಸಂತ್ರಸ್ತ ಮುಸ್ಲಿಂ ಮಹಿಳೆಯರಿಗೆ ಉತ್ತಮ ಪರಿಹಾರವನ್ನೊದಗಿಸುತ್ತದೆ.
ತ್ರಿವಳಿ ತಲಾಕ್ ಸಂತ್ರಸ್ತೆಯಾದ ಹುಮಾ ಖಯಾನಾತ್ ಎ ಎನ್ ಐ ಜತೆ ಮಾತನಾಡಿ ಮಸೂದೆಯು ಇನ್ನಷ್ಟು ಕಟ್ಟುನಿಟ್ಟಿನ ನಿಬಂಧನೆಗಳೊಡನೆ ಜಾರಿಯಾಗಬೇಕು ಎಂದರು
"ವಿಚ್ಛೇದಿತರಾದವರು ಮತ್ತು ವಿಚ್ಛೇದನದ ಬೆದರಿಕೆ ಎದುರಿಸುತ್ತಿರುವವರು ಈ ಕಾನೂನಿನಿಂದ ಪ್ರಯೋಜನ ಪಡೆದುಕೊಳ್ಳುತ್ತಾರೆ. ತ್ರಿವಳಿ ತಲಾಕ್ ವಿರುದ್ಧ ದೇಶದಲ್ಲಿ ಒಂದು ಕಾನೂನು ಅಗತ್ಯವಿದೆ.ಇದರಿಂದ ನಾವು ಒಂದಷ್ಟು ನೆಮ್ಮದಿ ಕಾಣಬಹುದು. ಕನಿಷ್ಟ ಮಹಿಳೆಯರಾರೂ ಇದನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ." ಅವರು ಹೇಳಿದರು/
ಫೈಜಾ ಖಾನ್ ತ್ರಿವಳಿ ತಲಾಕ್ ನ ಇನ್ನೊರ್ವ ಸಂತ್ರಸ್ತೆ  "ಪ್ರಧಾನಿ ನರೇಂದ್ರ ಮೋದಿ ಮತ್ತು  ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಮುಸ್ಲಿಂ ಮಹಿಳೆಯರಿಗಾಗಿ  ಪ್ರಾರಂಭಿಸಿದ ಕಾರ್ಯವಿಧಾನವು ಯಶಸ್ವಿಯಾಗಲಿದೆ ನಾವು ನಿಜವಾಗಿಯೂ ಸಂತೋಷಪಡುತ್ತೇವೆ ಈದ್ ಅಥವಾ ಬಕ್ರೀದ್ ಗಿಂತ ಮುಸ್ಲಿಂ ಮಹಿಳೆಯರ ಜೀವನದಲ್ಲಿ ಈ ದಿನ ಹೆಚ್ಚು ಮಹತ್ವದ್ದಾಗಿದೆ." ಎಂದರು. 
ತ್ರಿವಳಿ ತಾಲಾಖ್ ಅನ್ನು ಅಪರಾಧ ಎಂದು ಸಾರುವ ಮುಸ್ಲಿಂ ಮಹಿಳಾ ವಿವಾಹ (ಮದುವೆ ಮೇಲಿನ ಹಕ್ಕುಗಳ ರಕ್ಷಣೆ) 2017 ಮಸೂದೆ ಸಂಸತ್ತಿನಲ್ಲಿಇಂದು ಮಂಡನೆಯಾಗಿದೆ. ಇದರ ಪ್ರಕಾರ "ತನ್ನ ಹೆಂಡತಿಯ ಮೇಲೆ ವ್ಯಕ್ತಿಯೊಬ್ಬ ತಲಾಕ್ ಹೇಳುವುದಾದರೆ, ಮಾತನಾಡುವ ಅಥವಾ ಬರೆದಿರುವ ಅಥವಾ ವಿದ್ಯುನ್ಮಾನ ರೂಪದಲ್ಲಿ ಅಥವಾ ಬೇರೆ ಯಾವುದೇ ರೀತಿಯಲ್ಲಿ ಹೇಳುವುದು ನಿರರ್ಥಕ ಮತ್ತು ಕಾನೂನು ಬಾಹಿರ." ಎಂದಾಗಲಿದೆ.
ಈ ಮಸೂದೆಯ ವ್ಯಾಪ್ತಿಯಲ್ಲಿ ಬರುವ ಅಪರಾಧಗಳು ಪ್ರಕರಣಗಳು ಜಾಮೀನು ರಹಿತವಾಗಿರಲಿದೆ. ಜಮ್ಮು ಮತ್ತು ಕಾಶ್ಮಿ ಹೊರತುಪಡಿಸಿಬೆರೆಲ್ಲಾ ರಾಜ್ಯಗಳು ಈ ಮಸೂದೆ ವ್ಯಾಪ್ತಿಗೆ ಸೇರಿದೆ.
SCROLL FOR NEXT