ಚೆನ್ನೈನಲ್ಲಿ ರಜನಿ ಅಭಿಮಾನಿಗಳ ಸಂಭ್ರಮಾಚರಣೆ
ಚೆನ್ನೈ: ರಜನಿ ಅಭಿಮಾನಿಗಳ 25 ವರ್ಷಗಳ ಕನಸು ನನಸಾಗಿದ್ದು, ಸೂಪರ್ ಸ್ಚಾರ್ ರಾಜಕೀಯ ಪ್ರವೇಶ ಘೋಷಣೆಯಾಗುತ್ತಿದ್ದಂತೆಯೇ ಇತ್ತ ಅವರ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
ಚೆನ್ನೈನ ರಾಘವೇಂದ್ರ ಕಲ್ಯಾಣ ಮಂಟಪಂ ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ರಾಜಕೀಯ ಪ್ರವೇಶದ ಕುರಿತು ಘೋಷಣೆ ಮಾಡುತ್ತಿದ್ದಂತೆಯೇ ಇತ್ತ ಅವರ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದ್ದು, ಚೆನ್ನೈನಲ್ಲಿರುವ ರಜನಿ ನಿವಾಸದ ಎದುರು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಹರ್ಷದಿಂದ ಮಾತನಾಡಿರುವ ಅಭಿಮಾನಿಗಳು ನಮ್ಮ 25 ವರ್ಷಗಳ ಕನಸು ಇದೀಗ ನನಸಾಗಿದೆ. ಎಂಜಿಆರ್ ಸತ್ತಾಗಲೇ ರಜನಿ ರಾಜಕೀಯಕ್ಕೆ ಪ್ರವೇಶ ಮಾಡಬೇಕಿತ್ತು. ಆದರೆ ಅಂದು ಅವರು ಮಾಡಲಿಲ್ಲ. ಬಳಿಕ ಜಯಲಲಿತಾ ಅವರು ರಾಜಕೀಯ ಪ್ರವೇಶವಾಗಿ ಅವರು ಹೆಮ್ಮರವಾಗಿ ಬೆಳೆದರು.
ಆದರೂ ಇದೀಗ ನಮ್ಮ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಮಾಡಿದ್ದು, ನಮ್ಮ 25 ವರ್ಷಗಳ ಕಾಯುವಿಕೆ ಅಂತ್ಯವಾಗಿದೆ ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics