ದೇಶ

ಮನಮೋಹನ್ ಸಿಂಗ್ ವಿರುದ್ಧ ಪ್ರಧಾನಿ ರೈನ್ ಕೋಟ್ ಹೇಳಿಕೆ: ಇಂದು ಕೂಡ ಸದನದಲ್ಲಿ ಕೋಲಾಹಲ

Sumana Upadhyaya
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿನ್ನೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ವಿರುದ್ಧ ನೀಡಿರುವ ಮಳೆಯಂಗಿ ಹೇಳಿಕೆ ಇಂದು ಸಂಸತ್ತಿನ ಉಭಯ ಸದನಗಳಲ್ಲಿ ತೀವ್ರ ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು. ಖಂಡಿಸಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸಂಸತ್ತಿನ ಎರಡೂ ಸದನಗಳಲ್ಲಿ ತೀವ್ರ ಕೋಲಾಹಲವೆಬ್ಬಿಸಿದ್ದು  ಕಲಾಪವನ್ನು 11.30ಕ್ಕೆ ಮುಂದೂಡಲಾಯಿತು. 
ಕಾಂಗ್ರೆಸ್ ಹಿರಿಯ ನಾಯಕ ಆನಂದ್ ಶರ್ಮಾ ಪ್ರಧಾನಿ ಹೇಳಿಕೆಯನ್ನು ಖಂಡಿಸಿ ಅದು ನಾಚಿಕೆಗೇಡಿನ ಮಾತು ಎಂದು ಕರೆದಿದ್ದಾರೆ. ವಿರೋಧ ಪಕ್ಷಗಳಾದ ಸಿಪಿಐಎಂ, ಎಐಎಡಿಎಂಕೆ ಮತ್ತು ಟಿಎಂಸಿ ಪಕ್ಷದ ಸದಸ್ಯರು ಕೂಡ ಕಾಂಗ್ರೆಸ್ ಸದಸ್ಯರ ಜೊತೆ ಸೇರಿ  ಪ್ರತಿಭಟನೆ ನಡೆಸಿದರು.
ರಾಜ್ಯಸಭೆಯಲ್ಲಿ ಸದನದ ಬಾವಿಗಿಳಿದ ವಿರೋಧ ಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ತೀವ್ರ ಗದ್ದಲ, ಕೋಲಾಹಲವುಂಟಾದ ಕಾರಣ ಲೋಕಸಭೆಯನ್ನು 11.30ಕ್ಕೆ ಮತ್ತು ರಾಜ್ಯಸಭೆಯನ್ನು 12 ಗಂಟೆಯವರೆಗೆ ಮುಂದೂಡಲಾಯಿತು. 
SCROLL FOR NEXT