ಚಿಕಿತ್ಸೆ ಪಡೆಯಲು ಮುಂಬೈಗೆ ಬಂದಿಳಿದ ವಿಶ್ವದ ದಢೂತಿ ಈಜಿಪ್ಟ್ ಮಹಿಳೆ!
ಮುಂಬೈ: ಪ್ರಪಂಚದಲ್ಲೇ ಅತಿ ತೂಕದ ಮಹಿಳೆ ಎಂದು ಗುರುತಿಸಿಕೊಂಡಿರುವ 500 ಕೆಜಿ ತೂಕವಿರುವ ಈಜಿಪ್ಟ್ ಮಹಿಳೆ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದಾರೆ.
ಈಜಿಪ್ಟ್ ಏರ್ ವಿಮಾನದಲ್ಲಿ ಭಾರತಕ್ಕೆ ಆಗಮಿಸಿರುವ ದಢೂತಿ ಮಹಿಳೆ ಎಮಾನ್ ಅಹ್ಮದ್ ಅಬ್ದ್ ಅಲ್ ಅಟಿ, ಮುಂಬೈ ನ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಕಳೆದ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಎಮಾನ್ ಅಹ್ಮದ್ ಅಲ್ ಅಟಿ ಪ್ರಯಾಣ ಮಾಡಿದ್ದಾರೆ.
ಎಮಾನ್ ಅಹ್ಮದ್ ಅಲ್ ಅಟಿ ಅವರೊಂದಿಗೆ ಸಹೋದರಿ ಸಹ ಭಾರತಕ್ಕೆ ಆಗಮಿಸಿದ್ದು, ವಿಶ್ವದ ದಢೂತಿ ಮಹಿಳೆ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೊಳಗಾಗಲಿದ್ದಾರೆ. ಕ್ರೇನ್ ಹಾಗೂ ಟ್ರಕ್ ಸಹಾಯದ ಮೂಲಕ ಎಮಾನ್ ಅಹ್ಮದ್ ಅಲ್ ಅಟಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಮಾನ್ ಅಹ್ಮದ್ ಅಬ್ದ್ ಅವರ ತೂಕಕ್ಕೆ ಸರಿ ಹೊಂದುವಂತಹ ವಿಶೇಷ ಹಾಸಿಗೆ ಸೇರಿದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ.