ಟ್ವಿಟರ್ ಚಿತ್ರ 
ದೇಶ

ಮತ ಯಂತ್ರಗಳಿರುವ ಸ್ಟ್ರಾಂಗ್ ರೂಂ ಪ್ರವೇಶಿಸಿ ಬಾಕ್ಸ್ ಗಳನ್ನು ಕೊಠಡಿಯಿಂದ ಹೊರತಂದರು!

ಪಂಜಾಬ್ ಚುನಾವಣಾ ಮತ ಎಣಿಕೆಗೆ ದಿನಗಣನೆ ಆರಂಭವಾಗಿರುವಂತೆಯೇ ಜಲಂಧರ್ ನಲ್ಲಿರುವ ಸ್ಟ್ರಾಂಗ್ ರೂಮಿನಿಂದ ಮತ ಯಂತ್ರಗಳಿರುವ ಬಾಕ್ಸ್ ಗಳನ್ನು ಕೆಲ ಅನಾಮಧೇಯರು ಹೊರಗೆ ತಂದ ಘಟನೆ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಜಲಂಧರ್: ಪಂಜಾಬ್ ಚುನಾವಣಾ ಮತ ಎಣಿಕೆಗೆ ದಿನಗಣನೆ ಆರಂಭವಾಗಿರುವಂತೆಯೇ ಜಲಂಧರ್ ನಲ್ಲಿರುವ ಸ್ಟ್ರಾಂಗ್ ರೂಮಿನಿಂದ ಮತ ಯಂತ್ರಗಳಿರುವ ಬಾಕ್ಸ್ ಗಳನ್ನು ಕೆಲ ಅನಾಮಧೇಯರು ಹೊರಗೆ ತಂದ ಘಟನೆ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಜಲಂಧರ್ ನಲ್ಲಿ ಸ್ಟ್ರಾಂಗ್ ರೂಂ ನಲ್ಲಿ ಪಂಜಾಬ್ ಚುನಾವಣೆಯ ಮತದಾನ ನಡೆದ ಮತಯಂತ್ರಗಳನ್ನು ಬಾಕ್ಸ್ ಗಳಲ್ಲಿ ಶೇಖರಿಸಿಡಲಾಗಿದ್ದು, ವ್ಯಾಪಕ ಭದ್ರತೆ ಒದಗಿಸಲಾಗಿದೆ. ಹೀಗಿದ್ದೂ ಸ್ಟ್ರಾಂಗ್ ರೂಮ್ ನೊಳಗೆ ಕೆಲ  ಅನಾಮಧೇಯರು ಒಳ ಪ್ರವೇಶಿಸಿದ್ದು, ಕೊಠಡಿಯಲ್ಲಿರುವ ಬಾಕ್ಸ್ ಗಳ ಸ್ಥಳ ಬದಲಿಸುತ್ತಿದ್ದಾರೆ. ಅಲ್ಲದೆ ಬಾಕ್ಸ್ ಗಳನ್ನು ತೆರೆಯುತ್ತಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದ್ದು, ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ.

ಇನ್ನು ವಿಡಿಯೋದಲ್ಲಿರುವ ವ್ಯಕ್ತಿಗಳು ಚುನಾವಣಾ ಆಯೋಗದ ಅಧಿಕಾರಿಗಳು ಎನ್ನುವ ಮತ್ತೊಂದು ವಾದ ಕೂಡ ಕೇಳಿಬರುತ್ತಿದ್ದು, ಅಧಿಕಾರಿಗಳೇ ಆಗಿದ್ದರೆ ಬಾಕ್ಸ್ ಗಳನ್ನು ತೆರೆಯು ಪ್ರಮೇಯವೇನಿತ್ತು ಎಂಬ ಪ್ರಶ್ನೆಗಳೂ ಕೂಡ  ಉದ್ಭವವಾಗುತ್ತಿದೆ.

ಈ ಬಗ್ಗೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕಿಡಿಕಾರಿದ್ದು, ಭದ್ರತಾ ವೈಫಲ್ಯ ಸಂಬಂಧ ಚುನಾವಣಾ ಆಯೋಗದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ನಲ್ಲಿ  ವಿಡಿಯೋ ಅಪ್ಲೋಡ್ ಮಾಡಿರುವ ಕೇಜ್ರಿವಾಲ್ ಚುನಾವಣಾ ಆಯೋಗ ಏನು ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಮತಎಣಿಕೆ ಸಂದರ್ಭದಲ್ಲಿ ಮಾತ್ರ ಬಾಕ್ಸ್ ಗಳನ್ನು ತೆರೆಯಬೇಕು ಎನ್ನುವ ನಿಯಮವಿದ್ದರೂ ಅವುಗಳನ್ನೇಕೆ  ತೆರೆಯಲಾಗಿತ್ತು ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಪೊಲೀಸ್ ಪೇದೆ ಅಮಾನತು
ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಪಂಜಾಬ್ ಪೊಲೀಸ್ ಇಲಾಖೆಗೆ ಈ ಸಂಬಂಧ ಮಾಹಿತಿ ನೀಡಿದ್ದು, ಪ್ರಸ್ತುತ ಪ್ರದೇಶದ ಸುರಕ್ಷತೆಯ ಜವಾಬ್ದಾರಿ ಹೊತ್ತಿದ್ದ ಪೊಲೀಸ್ ಪೇದೆಯನ್ನು  ಅಮಾನತು ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್