ದೇಶ

ಪಶ್ಚಿಮ ಬಂಗಾಳ: 350 ಗ್ರಾಂ ಹೆರಾಯಿನ್ ವಶ, 3 ಶಂಕಿತರ ಬಂಧನ

Manjula VN

ಕೋಲ್ಕತಾ: ಗಡಿ ಭದ್ರತಾ ಪಡೆ ಜಂಟಿಯಾಗಿ ನಡೆಸಿದ್ದು, 350 ಗ್ರಾಂನಷ್ಟು ಹೆರಾಯಿನ್ ಪುಡಿಯನ್ನು ವಶಕ್ಕೆ ಪಡೆದುಕೊಂಡು ಮೂವರು ಶಂಕಿತರನ್ನು ಬಂಧನಕ್ಕೊಳಪಡಿಸಿರುವುದಾಗಿ ಬುಧವಾರ ತಿಳಿದುಬಂದಿದೆ.

ಖಚಿತ ಮಾಹಿತಿ ಆಧಾರದ ಮೇಲೆ ಬಿಎಸ್ಎಫ್ ಪಡೆ ಹಾಗೂ ಕೋಲ್ಕತಾದ ಎನ್'ಸಿಬಿ ಅಧಿಕಾರಿಗಳು ಪಶ್ಚಿಮಬಂಗಾಳದ ಮುರ್ಶಿದಾಬಾದ್"ನ ಅಸ್ಟೋಸಿಯಾ ಹೊರವಲಯದಲ್ಲಿ ಜಂಟಿಯಾಗಿ ಕಾರ್ಯಾಚರಣೆ ನಡೆಸಲಿದ್ದರು. ಈ ವೇಳೆ ನಡೆಸಲಾದ ದಾಳಿಯಲ್ಲಿ 350 ಗ್ರಾಂನಷ್ಟು ಹೆರಾಯಿನ್ ಪೌಡರ್ ನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಿಎಸ್ಎಫ್ ಅಧಿಕಾರಿಗಳು ಹೇಳಿದ್ದಾರೆ.

ದಾಳಿ ವೇಳೆ ಮೂವರು ಶಂಕಿತರನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು, ಬಂಧಿತರನ್ನು ಎಂಡಿ. ಖೈರುಲ್ ಇಸ್ಲಾಮ್, ಒಬೈದುಲ್ ರಹಮಾನ್ ಮತ್ತು ಅಜ್ಮೆರ್ ಶೇಕ್ ಎಂದು ಗುರ್ತಿಸಲಾಗಿದೆ.

SCROLL FOR NEXT