ದೇಶ

ತ.ನಾಡು ರಾಜಕೀಯ ಬಿಕ್ಕಟ್ಟು: ಪನ್ನೀರ್'ಸೆಲ್ವಂಗೆ ಹೆಚ್ಚಿದ ಬೆಂಬಲ

Manjula VN

ಚೆನ್ನೈ: ವಿ.ಕೆ. ಶಶಿಕಲಾ ಅವರ ವಿರುದ್ಧ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸುತ್ತಿದ್ದಂತೆಯೇ ತಮಿಳುನಾಡಿನ ರಾಜ್ಯ ರಾಜಕೀಯ ಮಹತ್ದದ ತಿರುವು ಪಡೆದುಕೊಂಡಿದೆ.

ಶಶಿಕಲಾ ಅವರನ್ನು ದೋಷಿ ಎಂದು ಸುಪ್ರೀಂ ಆದೇಶಿಸಿದ ಬೆನ್ನಲ್ಲೇ ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರಿಗೆ ಬೆಂಬಲಗಳು ಹೆಚ್ಚಾಗ ತೊಡಗಿದ್ದು, ನಿನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಂಬಂಧಿ ದೀಪಾ ಜಯಕುಮಾರ್ ಅವರು ಪನ್ನೀರ್ ಸೆಲ್ವಂ ಅವರಿಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಪನ್ನೀರ್ ಸೆಲ್ವಂ ಅವರನ್ನು ಭೇಟಿಯಾದ ದೀಪಾ ಜಯಕುಮಾರ್ ಅವರು ಮೊದಲಿಗೆ ಮರೀನಾ ಬೀಚ್ ನಲ್ಲಿರುವ ಜಯಲಲಿತಾ ಅವರ ಸಮಾಧಿ ಬಳಿ ಹೋಗಿ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಪನ್ನೀರ್ ಸೆಲ್ವಂ ಅವರ ನಿವಾಸಕ್ಕೆ ತೆರಳಿದರು. ಈ ವೇಳೆ ಸೆಲ್ವಂ ಅವರ ಪತ್ನಿ ದೀಪಾ ಅವರನ್ನು ದೀಪ ಬೆಳಗುವ ಮೂಲಕ ಸ್ವಾಗತಿಸಿದರು.

ನಂತರ ಪನ್ನೀರ್ ಸೆಲ್ವಂ ಅವರಿಗೆ ತಮ್ಮ ಬೆಂಬಲ ಸೂಚಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ದೀಪಾ ಜಯಕುಮಾರ್ ಅವರು, ಇಡೀ ರಾಜ್ಯವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಯತ್ನಿಸುತ್ತಿದ್ದ ಕುಟುಂಬದ ವಿರುದ್ಧ ತೀರ್ಪು ಬಂದಿದೆ. ಭ್ರಷ್ಟಾಚಾರದ ಹಿಂದಿರುವವರೆಲ್ಲರೂ ಶಿಕ್ಷೆ ಅನುಭವಿಸಲೇಬೇಕು. ಈ ಹಿಂದೆ ನಾನು ಫೆಬ್ರವರಿ 24 ರಿಂದ ರಾಜಕೀಯ ಪ್ರಯಾಣವನ್ನು ಆರಂಭಿಸಲಿದ್ದೇನೆಂದು ಎಂದು ಹೇಳಿದ್ದೆ. ಆದರೆ, ಇಂದಿನಿಂದಲೇ ನನ್ನ ರಾಜಕೀಯ ಪ್ರಯಾಣ ಆರಂಭವಾಗುತ್ತಿದೆ. ಪಳನಿಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕನ್ನಾಗಿ ಆಯ್ಕೆ ಮಾಡಿರುವುದು ಸರಿಯಲ್ಲ. ಅವರಿಗೆ ಜಯಲಲಿತಾ ಬೆಂಬಲ ಇರಲಿಲ್ಲ ಎಂದು ಹೇಳಿದರು.

SCROLL FOR NEXT