ನವದೆಹಲಿ: ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ರುವಾಂಡ ಮತ್ತು ಉಗಾಂಡ ದೇಶಗಳ 5 ದಿನಗಳ ಭೇಟಿಗಾಗಿ ಇಂದು ಪ್ರಯಾಣ ಆರಂಭಿಸಲಿದ್ದಾರೆ. ಆಫ್ರಿಕಾ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಬೆಳೆಸುವ ಪ್ರಯತ್ನ ಇದಾಗಿದೆ.
ದ್ವಿಪಕ್ಷೀಯ ಹಿತಾಸಕ್ತಿಗಳ ವಿಷಯಗಳ ಕುರಿತು ಉಪ ರಾಷ್ಟ್ರಪತಿಗಳು ಈ ಸಂದರ್ಭದಲ್ಲಿ ಅಲ್ಲಿನ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ.ಅವರೊಂದಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ವಿಜಯ್ ಸಂಪ್ಲಾ ಹಾಗೂ ನಾಲ್ವರು ಸಂಸತ್ ಸದಸ್ಯರು ಮತ್ತು ಅಧಿಕಾರಿಗಳು ತೆರಳಲಿದ್ದಾರೆ. ಪೂರ್ವ ಆಫ್ರಿಕಾ ರಾಷ್ಟ್ರಗಳು ಮತ್ತು ಭಾರತದ ಜೊತೆ
ಸಮಕಾಲೀನ ಸಂಬಂಧವನ್ನು ಬೆಳೆಸಲು ಉಪರಾಷ್ಟ್ರಪತಿಗಳ ಈ ಭೇಟಿ ಸಹಕಾರಿಯಾಗಲಿದೆ.