ಭೋಜ್‌ಪುರ(ಉತ್ತರಪ್ರದೇಶ): 1996ರ ಗಾಜಿಯಾಬಾದ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸರಿಗೆ ಸಿಬಿಐ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
1996ರ ನವೆಂಬರ್ 8ರಂದು ಹಾಡು ಹಗಲೇ ಜಲಾಲುದ್ದೀನ್, ಜಸ್ಬೀರ್, ಅಶೋಕ್ ಮತ್ತು ಪ್ರವೇಶ್ ಎಂಬ ಯುವಕರನ್ನು ಕ್ರಿಮಿನಲ್ಸ್ ಗಳು ಎಂದು ಪೊಲೀಸರು ಎನ್‌ಕೌಂಟರ್ ಮಾಡಿದ್ದರು. ಆದರೆ ಇದು ನಕಲಿ ಎನ್‌ಕೌಂಟರ್ ಎಂದು ಸಿಬಿಐ ಕೋರ್ಟ್ ಹೇಳಿದ್ದು ಭೋಜ್ ಪುರ ಠಾಣೆಯ ಮುಖ್ಯಸ್ಥ ಲಾಲ್ ಸಿಂಗ್, ಸಬ್ ಇನ್ ಸ್ಪೆಕ್ಟರ್ ಜೋಗಿಂದರ್ ಸಿಂಗ್, ಪೇದೆಗಳಾದ ಸೂರ್ಯ ಭಾನ್ ಹಾಗೂ ಸುಭಾಶ್ ಚಂದ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಈ ನಾಲ್ವರು ಪೊಲೀಸರು ನಕಲಿ ಎನ್‌ಕೌಂಟರ್, ಸುಳ್ಳು ಪುರಾವೆ ಒದಗಿಸಿದ್ದು ಹಾಗೂ ಸಾಕ್ಷ್ಯ ನಾಶ ಮಾಡಿದ ಆರೋಪ ಸಾಬೀತಾಗಿದ್ದು ಅವರು ಅಪರಾಧಿಗಳು ಎಂದು ಕೋರ್ಟ್ ಹೇಳಿದ್ದು ತೀರ್ಪನ್ನು ಇಂದಿಗೆ ನಿಗದಿಪಡಿಸಿತ್ತು.