ಮುಂಬಯಿ: 19 ನೇ ಶತಮಾನದ ಮಹಾನ್ ಸಮಾಜ ಸುಧಾರಕಿ ಹಾಗೂ ಭಾರತದ ಮೊತ್ತ ಮೊದಲ ಸ್ತ್ರೀವಾದಿ ಸಾವಿತ್ರಿಬಾಯಿ ಜ್ಯೋತಿರಾವ್ ಪುಲೆ ಅವರ 186 ನೇ ಹುಟ್ಟುಹಬ್ಬದ ಅಂಗವಾಗಿ ತಂತ್ರಜ್ಞಾನ ದೈತ್ಯ ಗೂಗಲ್ ಡೂಡಲ್ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದೆ.
1831ರ ಜನವರಿ 3 ರಂದು ಜನಿಸಿದ್ದ ಸಾವಿತ್ರಿಬಾಯಿ, ತಮ್ಮ 9ನೇ ವಯಸ್ಸಿನಲ್ಲಿ 13 ವರ್ಷದ ಜ್ಯೋತಿರಾವ್ ಪುಲೆ ಅವರನ್ನು ವಿವಾಹವಾದರು. ತಮಗೆ 17 ವರ್ಷ ವಯಸ್ಸಾದ ನಂತರ ಈ ದಂಪತಿ ಪುಣೆಯ ಬಿದೇವಾಡದಲ್ಲಿ ಹೆಣ್ಣುಮಕ್ಕಳಿಗಾಗಿ ಮೊದಲ ಶಾಲೆಯನ್ನು ಆರಂಭಿಸಿದರು.
ಮೊದಲಿಗೆ ವಿವಿಧ ಜಾತಿಗಳ 9 ಹೆಣ್ಣು ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡರು. ತುಂಬಾ ಸಾಂಪ್ರಾದಾಯಿಕ ರೀತಿ ನೀತಿಗಳನ್ನು ಹೊಂದಿರುವ ಭಾರತೀಯ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಸಾವಿತ್ರಿ ಅವರು ದಿಟ್ಟ ಹೆಜ್ಜೆ ಇಟ್ಟಿದ್ದರು.
ಸರಳವಾಗಿ ಗೂಗಲ್ ಡೂಡಲ್ ಅರ್ಪಿಸಿರುವ ಗೂಗಲ್, ಸೀರೆ ಧರಿಸಿ ಸಾವಿತ್ರಿ ಬಾಯಿ ಅವರು ತಲೆ ಮೇಲೆ ಸೆರಗುಹಾಕಿಕೊಂಡಿರುವ ಸಾವಿತ್ರಿ ಬಾಯಿ ಅವರ ಚಿತ್ರ ಬರೆಸಿದೆ.
ಭಾರತದ ಮೊಟ್ಟ ಮೊದಲ ಶಿಕ್ಷಕಿ, ದಣಿವರಿಯದ ಸತ್ಯಶೋಧಕಿ. ಆಧುನಿಕ ಶಿಕ್ಷಣದ ತಾಯಿ. ಸಾವಿತ್ರಿಬಾಯಿ ಅವರ ವೇಷ ಭೂಷಣ ಸರಳವಾಗಿತ್ತು. ಖಾದಿ ಸೀರೆಯನ್ನೇ ಅವರು ಧರಿಸುತ್ತಿದ್ದರು. ಅದರಂತೆಯೇ ಗೂಗಲ್ ಗೌರವ ನಮನ ಸಲ್ಲಿಸಿದೆ.