ಪಂಜಾಬ್ ನಲ್ಲಿ ಮೊದಲ ಬಾರಿಗೆ ಮತಗಳ ಮುದ್ರಿತ ದಾಖಲೆ
ಮುಂಬರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕಗಳನ್ನು...
ಚಂಡೀಗಢ: ಮುಂಬರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕಗಳನ್ನು ಪ್ರಕಟಿಸಿದ ನಂತರ ಪಂಜಾಬ್ ಮುಖ್ಯ ಚುನಾವಣಾಧಿಕಾರಿ ನೀತಿ ಸಂಹಿತೆ ಘೋಷಿಸಿದ್ದಾರೆ.
ಚುನಾವಣಾ ದಿನಾಂಕ ಘೋಷಣೆಯಾದ ಕೂಡಲೇ ಚುನಾವಣಾಧಿಕಾರಿ ವಿ.ಕೆ.ಸಿಂಗ್, ಚುನಾವಣಾ ನೀತಿ ಸಂಹಿತೆಯನ್ನು ಜಾರಿಗೊಳಿಸಿದ್ದಾರೆ.ಸುಮಾರು 5,000 ಅರೆ ಸೇನಾಪಡೆಯ ಪೊಲೀಸ್ ಸಿಬ್ಬಂದಿ ರಾಜ್ಯವನ್ನು ತಲುಪಿದ್ದು ಇನ್ನೂ 50 ತುಕಡಿಗಳು ಬರುವ ನಿರೀಕ್ಷೆಯಿದೆ. ಜಾಹಿರಾತುಗಳಿಂದ ಎಲ್ಲಾ ರಾಜಕೀಯ ನಾಯಕರ ಫೋಟೋಗಳನ್ನು ತೆಗೆಯುವಂತೆ ಸರ್ಕಾರಕ್ಕೆ ಸೂಚಿಸಿದ್ದಾರೆ.
ಇದೇ ಮೊದಲ ಬಾರಿಗೆ ಪಂಜಾಬ್ ನಲ್ಲಿ 35 ಅತಿ ಉನ್ನತ ಮತ್ತು ಸೂಕ್ಷ್ಮ ಕ್ಷೇತ್ರಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಮತದಾರರ ಪರಿಶೀಲನಾ ಪೇಪರ್ ಆಡಿಟ್ ಟ್ರಯಲ್ ಜೊತೆ ಲಗತ್ತಿಸಲಾಗಿದೆ. ಇದರಲ್ಲಿ ಮತದಾರರು ಹಾಕುವ ಪ್ರತಿ ಮತಗಳು ಮುದ್ರಿತ ದಾಖಲೆಗಳಾಗುತ್ತವೆ. ಸಮಾಧಾನ್ ಮತ್ತು ಸುವಿದಾ ಆಪ್ ಗಳನ್ನು ಆರಂಭಿಸಲಾಗಿದೆ.
ಸಮಾಧಾನ್ ನಲ್ಲಿ ದಾಖಲಾದ ದೂರುಗಳನ್ನು 24 ಗಂಟೆಗಳೊಳಗೆ ಪರಿಹರಿಸಲಾಗುತ್ತದೆ. ಸುವಿದಾದಲ್ಲಿ ಅಭ್ಯರ್ಥಿಗಳು ರ್ಯಾಲಿ ನಡೆಸಲು ಅನುಮತಿಯನ್ನು ಹೆಸರು ದಾಖಲಿಸಿ 24 ಗಂಟೆಗಳೊಳಗೆ ಪಡೆಯಬಹುದು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.