ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವ ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ. ಇದೇ ಮೊದಲ ಬಾರಿಗೆ ಅರಬ್ ನ (ಯುಎಇ) ರಕ್ಷಣಾ ಪಡೆಗಳು ಗಣರಾಜ್ಯೋತ್ಸವ ದಿನದಂದು ರಾಜ್ ಪಥ್ ನಲ್ಲಿ ನಡೆಯಲಿರುವ ಪರೇಡ್ ನಲ್ಲಿ ಭಾಗವಹಿಸಲಿವೆ.
2016 ರಲ್ಲಿ ಫ್ರೆಂಚ್ ಪಡೆ ಇದೇ ಮಾದರಿಯಲ್ಲಿ ಪರೇಡ್ ನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಈಗ ಅರಬ್ ನ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಝಯೀದ್-ಅಲ್- ನಹ್ಯಾನ್ 2017 ರ ಗಣರಾಜ್ಯೋತ್ಸವಕ್ಕೆ ವಿಶೇಷ ಅಥಿತಿಯಾಗಿರಲಿದ್ದು, ಇದೇ ಮೊದಲ ಬಾರಿಗೆ ಯುಎಇ ಪಡೆ ಗಣಾರಾಜ್ಯೋತ್ಸವದಲ್ಲಿ ಭಾಗವಹಿಸಲಿದೆ.
ಜ.20 ರಂದು ಶೇಖ್ ಮೊಹಮ್ಮದ್ ವಿದೇಶಾಂಗ ಇಲಾಖೆ ರಾಜ್ಯ ಸಚಿವರಾದ ಎಂಜೆ ಅಕ್ಬರ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಶೇಖ್-ಮೊಹಮ್ಮದ್ ಅವರ ಭಾರತ ಭೇಟಿಯಿಂದ ಅರಬ್-ಭಾರತ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ. ರಸ್ತೆ ಮತ್ತು ಹೆದ್ದಾರಿ ಕ್ಷೇತ್ರಗಳಲ್ಲಿ ಹೂಡಿಕೆಯ ಬಗ್ಗೆ ದ್ವಿಪಕ್ಷೀಯ ಮಾತುಕತೆ ವೇಳೆ ಪ್ರಮುಖವಾಗಿ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics