ಹೈದರಾಬಾದ್: ಮುಸ್ಲಿಮರಿಗೆ ಶೇ.12ರಷ್ಟು ಮೀಸಲಾತಿ ಕಲ್ಪಿಸಲು ಮುಂದಾಗಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ, ಈ ಮೀಸಲಾತಿ ಪ್ರಸ್ತಾವನೆ ಅಸಂವಿಧಾನಿಕ ಎಂದು ಗುರುವಾರ ಹೇಳಿದೆ.
ತಮ್ಮ ಸರ್ಕಾರ ಮುಸ್ಲಿಮರಿಗೆ ಶೇ.12ರಷ್ಚು ಮೀಸಲಾತಿ ಕಲ್ಪಿಸಲಿದೆ ಎಂಬ ಸಿಎಂ ಕೆಸಿಆರ್ ಹೇಳಿಕೆ ಒಂದು ಸುದ್ಧ ಸುಳ್ಳು ಮಾತ್ರವಲ್ಲ ಅದು ಅಸಂವಿಧಾನಿಕವಾಗಿದ್ದು. ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ ಎಂದು ತೆಲಂಗಾಣ ಬಿಜೆಪಿ ಅಧಿಕೃತ ವಕ್ತಾರ ಕೃಷ್ಣ ಸಾಗರ್ ರಾವ್ ಅವರು ಆರೋಪಿಸಿದ್ದಾರೆ.
ನಿನ್ನೆಯಷ್ಟೆ ಕೆಸಿಆರ್ ಅವರು ಹಿಂದೂಳಿದ ಮುಸ್ಲಿಮರಿಗೆ ಶೇ.12ರಷ್ಟು ಮೀಸಲಾತಿ ಕಲ್ಪಿಸುವ ವಿಧೇಯಕವನ್ನು ಬಜೆಟ್ ಅಧಿವೇಶನದಲ್ಲಿ ಮಂಡಿಸುವುದಾಗಿ ವಿಧಾನಸಭೆಗೆ ತಿಳಿಸಿದ್ದರು.
ತೆಲಂಗಾಣ ರಾಷ್ಟ್ರ ಸಮಿತಿ ಚುನಾವಣೆ ವೇಳೆ ನೀಡಿದ್ದ ಪ್ರಮುಖ ಭರವಸೆಗಳಲ್ಲಿ ಮುಸ್ಲಿಂ ಮೀಸಲಾತಿಯೂ ಒಂದು.