ದೇಶ

ಮೊದಲ ಬಾರಿಗೆ ಗಣರಾಜ್ಯೋತ್ಸವದಲ್ಲಿ ಯುಎಇ ಸೇನೆಯಿಂದ ಪಥಸಂಚಲನ

Vishwanath S
ನವದೆಹಲಿ: ಅಬುಧಾಬಿಯ ಯುವರಾಜ ಶೇಖ್ ಮೊಹಮ್ಮದ್ ಬಿನ್ ಜಾಯೆದ್ 68ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಬಂದಿದ್ದು ಇದರ ಜತೆಗೆ ಮೊಟ್ಟ ಮೊದಲ ಬಾರಿಗೆ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಯುಎಇ ಸೇನೆ ಸಹ ಭಾಗವಹಿಸಿತ್ತು. 
ಯುಎಇ ಸೇನೆಯಿಂದ ಒಟ್ಟು 149 ಯೋಧರು ಲೆಫ್ಟಿನೆಂಟ್ ಕರ್ನಲ್ ಅಬೋದ್ ಮುಸಾಬೇ ಅಲ್ಫಾಫೆಲಿ ನೇತೃತ್ವದಲ್ಲಿ ಪಥ ಸಂಚಲನ ನಡೆಸಿದರು. ಜತೆಗೆ ಯುಎಇ ಬ್ಯಾಂಡ್ ನಲ್ಲಿ 35 ಮಂದಿ ಸಂಗೀತಗಾರರು ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಯುಎಇ ಸೇನೆಯಿಂದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಗೌರವ ವಂದನೆ ಸ್ವೀಕರಿಸಿದರು. 
ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಫ್ರಾನ್ಸ್ ಬಳಿಕ ಪಥ ಸಂಚಲನ ನಡೆಸಿದ ಎರಡನೇ ರಾಷ್ಟ್ಪವಾಗಿದೆ. ಯುಎಇ ಜತೆಗೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಭದ್ರತಾ ಪಡೆ(ಎನ್ಎಸ್ಜಿ) ಎಲ್ಲರಿಗೂ ಬ್ಲಾಕ್ ಕಮಾಂಡೋ ಹೆಸರಿನಿಂದ ಪರಿಚಿತರಾಗಿರುವ ಈ ಪಡೆ ಸಹ ಇದೇ ಮೊದಲ ಬಾರಿಗೆ ಪಥ ಸಂಚಲನ ನಡೆಸಿತು. 
SCROLL FOR NEXT