ಮುಂಬೈ: ಮಹಾರಾಷ್ಟ್ರದ ರೈತರ ಸಾಲ ಮನ್ನಾ ಮಾಡಿರುವ ಕೀರ್ತಿಯನ್ನು ಕಸಿಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಎನ್ ಡಿಎ ಮಿತ್ರ ಪಕ್ಷ ಶಿವಸೇನೆ ಆರೋಪಿಸಿದೆ.
ಕೀರ್ತಿಯನ್ನು ಕಸಿದುಕೊಳ್ಳುವುದೂ ಸಹ ಈಗ ರಾಜಕೀಯ ಸಿದ್ಧಾಂತವಾಗಿಬಿಟ್ಟಿದೆ ಎಂದು ಶಿವಸೇನೆ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದೆ. ಈ ಬಗ್ಗೆ ಸಾಮ್ನಾ ಪತ್ರಿಕೆಯಲ್ಲಿ ಲೇಖನ ಪ್ರಕಟಿಸಿರುವ ಶಿವಸೇನೆ, ಮಹಾರಾಷ್ಟ್ರದಲ್ಲಿ ರೈತರು ಹಲವು ಬೇಡಿಕೆಗಳನ್ನು ಮುಂದಿಟ್ಟು ನಡೆಸಿದ್ದ ಪ್ರತಿಭಟನೆ ವೇಳೆ, ರೈತರ ಸಾಲ ಮನ್ನ ಮಾಡುವುದಕ್ಕೆ ಬಿಜೆಪಿಯ ಮೇಲೆ ಶಿವಸೇನೆ ಸಹ ಒತ್ತಡ ಹೇರಿತ್ತು. ಆ ನಂತರವೇ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದು ಹೇಳಿದೆ.
ಲಾಭ-ನಷ್ಟಗಳನ್ನು ಯೋಚಿಸಿ ರಾಜಕೀಯ ಮಾಡಲಾಗುತ್ತದೆ. ಜನರನ್ನು ಗೊಂದಲಕ್ಕೀಡು ಮಾಡುವುದಕ್ಕೆ ಯೋಜನೆಗಳನ್ನು ರೂಪಿಸಲಾಗುತ್ತದೆ. ಗರೀಭಿ ಹಠಾವೋ ಯೋಜನೆ ಏನಾಯಿತು? ಅಚ್ಚೆ ದಿನ್ ಈಗ ಒಳ್ಳೆಯ ಸಂಶೋಧನಾತ್ಮಕ ವಿಷಯವಾಗಿದೆ ಎಂದು ಸಾಮ್ನಾ ಬಿಜೆಪಿ ವಿರುದ್ಧ ಹರಿಹಾಯ್ದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics