ದೇಶ

30 ದಿನದೊಳಗೆ ಕಡ್ಡಾಯವಾಗಿ ಮದುವೆ ನೋಂದಣಿ ಮಾಡಿಸಬೇಕು: ಕಾನೂನು ಆಯೋಗ ಶಿಫಾರಸು

Lingaraj Badiger
ನವದೆಹಲಿ: ಮದುವೆಯಾದ 30 ದಿನದೊಳಗೆ ದಂಪತಿಗಳು ಕಡ್ಡಾಯವಾಗಿ ತಮ್ಮ ಮದುವೆಯನ್ನು ನೋಂದಣಿ ಮಾಡಿಸಬೇಕು ಎಂದು ಮಂಗಳವಾರ ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಮದುವೆ ನಂತರ ಸಕಾರಣವಿಲ್ಲದೆ ತಮ್ಮ ಮದೆಯನ್ನು ನೋಂದಣಿ ಮಾಡಿಸದೆ ಇರುವವರಿಗೆ ದಿನದ ಆಧಾರದ ಮೇಲೆ ದಂಡ ವಿಧಿಸುವಂತೆ ಕಾನೂನು ಆಯೋಗ ಶಿಫಾರಸು ಮಾಡಿದೆ.
ಈ ಮಧ್ಯೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಎಲ್ಲಾ ಧರ್ಮದವರ ಮದುವೆ ನೋಂದಣಿ ಕಡ್ಡಾಯಗೊಳಿಸಲು ಎಲ್ಲಾ ಸಿದ್ಧತೆ ನಡೆಸಿದೆ.
SCROLL FOR NEXT