ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ 
ದೇಶ

ನಾನು ಗಲ್ಲಿಗೆ ಏರಲು ಸಿದ್ಧ, ಆದರೆ ಬಿಜೆಪಿಯನ್ನು ಮಾತ್ರ ಕಿತ್ತೊಗೆಯದೆ ಬಿಡುವುದಿಲ್ಲ: ಲಾಲೂ ಪ್ರಸಾದ್ ಯಾದವ್

ತಮ್ಮ ಹಾಗೂ ತಮ್ಮ ಪತ್ನಿ, ಪುತ್ರನ ಮೇಲೆ ಎಫ್ಐಆರ್ ದಾಖಲಿಸಿದ ನಂತರ ಸಿಬಿಐ ಮತ್ತು ಜಾರಿ...

ಪಾಟ್ನಾ: ತಮ್ಮ ಹಾಗೂ ತಮ್ಮ ಪತ್ನಿ, ಪುತ್ರನ ಮೇಲೆ ಎಫ್ಐಆರ್ ದಾಖಲಿಸಿದ ನಂತರ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತಮ್ಮ  ಮತ್ತು ತಮ್ಮ ಪುತ್ರಿಯಾದ ಮಿಸಾ ಭಾರ್ತಿ ನಿವಾಸದ ಮೇಲೆ ನಡೆಸಿದ ದಾಳಿಯನ್ನು ರಾಷ್ಟ್ರೀಯ ಜನತಾ ದಳ(ಆರ್ ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಕೇಂದ್ರ ಸರ್ಕಾರದ ಆಡಳಿತ ಯಂತ್ರದ ದುರುಪಯೋಗ ಎಂದು ಬಣ್ಣಿಸಿದ್ದಾರೆ. ಇದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೇ ಕಾರಣ ಎಂದು ಕೂಡ ಅವರು ಆರೋಪಿಸಿದ್ದಾರೆ. ಈ ದಾಳಿಯು ತಮ್ಮನ್ನು ಕೆಡಿಸಲು ಮತ್ತು ಬಿಹಾರದಲ್ಲಿನ ಭಾರೀ ಮೈತ್ರಿಯನ್ನು ಮುರಿಯಲು ನಡೆಸುತ್ತಿರುವ ಕೆಟ್ಟ ನಡೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
'' ನಾನು ನೇಣು ಹಾಕಿಕೊಳ್ಳಲು ಸಿದ್ಧನಿದ್ದೇನೆ ಅಮಿತ್ ಶಾ ಮತ್ತು ಮೋದಿಯವರೇ, ಆದರೆ ನಿಮ್ಮನ್ನು ಬುಡಸಮೇತ ಕಿತ್ತೊಗೆಯದೆ ಬಿಡುವುದಿಲ್ಲ. ನಿಮ್ಮ ಅಹಂಕಾರ ನಿಮಗೆ ಮುಳುವಾಗಲಿದೆ ಎಂದು ಪಾಟ್ನಾದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಅವರು ನಿನ್ನೆ ರಾಂಚಿಯಲ್ಲಿ ಮೇವು ಹಗರಣ ಕೇಸಿಗೆ ಸಂಬಂಧಪಟ್ಟಂತೆ ಸಿಬಿಐ ವಿಶೇಷ ನ್ಯಾಯಾಲಯದ ಎದುರು ವಿಚಾರಣೆಗೆ ಹಾಜರಾಗಿದ್ದರು.
''ನರೇಂದ್ರ ಮೋದಿ ಮತ್ತು ಅಮಿತ್ ಶಾ ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದು ಇದರಲ್ಲಿ ಸಿಬಿಐಯದ್ದು ತಪ್ಪೇನಿಲ್ಲ. ಸಿಬಿಐ ದಾಳಿ ವೇಳೆ ಅನೇಕ ಅಧಿಕಾರಿಗಳು ನನ್ನ ಬಳಿ ತಮಗೆ ಕೇಂದ್ರ ಸರ್ಕಾರದ ಒತ್ತಡವಿದೆ ಎಂದು ಹೇಳಿಕೊಂಡಿದ್ದಾರೆ. ಇದು ಸಂಪೂರ್ಣ ರಾಜಕೀಯ ಪ್ರೇರಿತ ನಡೆ. ಕೇಂದ್ರ ಸರ್ಕಾರ ನನ್ನ ಮತ್ತು ನನ್ನ ಕುಟುಂಬವನ್ನು ಗುರಿಯಾಗಿಟ್ಟುಕೊಂಡಿದೆ. ಯಾಕೆಂದರೆ ನರೇಂದ್ರ ಮೋದಿ ಸರ್ಕಾರ ಮತ್ತು ಬಿಜೆಪಿಯನ್ನು ದೇಶದಿಂದ ಕಿತ್ತೊಗೆಯಲು ನಾನು ದೃಢ ಸಂಕಲ್ಪ ಮಾಡಿದ್ದೇನೆ'' ಎಂದು ಆಕ್ರೋಶದಿಂದ ಹೇಳಿದರು.
ಆಧಾರರಹಿತ ಕಾರಣಗಳಿಗಾಗಿ ಈ ಕೇಸಿನಲ್ಲಿ ತಮ್ಮ ಪುತ್ರ ತೇಜಸ್ವಿ ಮತ್ತು ಪತ್ನಿ ರಾಬ್ರಿಯನ್ನು ಎಳೆದು ತಂದದ್ದಕ್ಕಾಗಿ ಕೂಡ ಲಾಲೂ ಪ್ರಸಾದ್ ಯಾದವ್ ಆಕ್ರೋಶ ವ್ಯಕ್ತಪಡಿಸಿದರು. ಹೊಟೇಲ್ ನ ಗುತ್ತಿಗೆ ನೀಡಿದ ಸಂದರ್ಭದಲ್ಲಿ ತೇಜಸ್ವಿ ಅಪ್ರಾಪ್ತನಾಗಿದ್ದ. ರಾಬ್ರಿ ಕೂಡ ಸಾರ್ವಜನಿಕವಾಗಿ ಪರಿಚಯದ ವ್ಯಕ್ತಿಯಾಗಿರಲಿಲ್ಲ. ತಮ್ಮ ನಿವಾಸದ ಮೇಲೆ ಸಿಬಿಐ ನಡೆಸಿದ ದಾಳಿಗೆ ಸಂಬಂಧಪಟ್ಟಂತೆ ಸಿಬಿಐಯಿಂದ ದಾಸ್ತಾನು ಪಟ್ಟಿಯನ್ನು ಕೇಳಿದ್ದೇನೆ. ದಾಳಿಗೂ ಮುನ್ನ ಸಿಬಿಐ ಅಧಿಕಾರಿಗಳ ಜೊತೆ ಮಾತನಾಡಿದ್ದು ಇದೊಂದು ಶೋಧ ಕಾರ್ಯಾಚರಣೆಯಷ್ಟೆ ಎಂದು ಹೇಳಿದರು. ಅದರಂತೆ ನಾನು ನನ್ನ ಕುಟುಂಬದವರಿಗೆ ತನಿಖೆಗೆ ಅಧಿಕಾರಿಗಳ ಕಾರ್ಯಾಚರಣೆಗೆ ಸಹಕರಿಸುವಂತೆ ಹೇಳಿದ್ದೇನೆ ಎಂದರು.

ಇಂದು ಬೆಳಗ್ಗೆ ರಾಂಚಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಅಧಿಕಾರಾವಧಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಅಧಿಕ ಲಾಭವುಂಟಾಯಿತು. ಆದರೆ ನಾನು ಎಂದಿಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರಲಿಲ್ಲ  ಎಂದು ಹೇಳಿದರು.

ಐಆರ್ ಸಿಟಿಸಿಗೆ ಹೊಟೇಲ್ ಗಳ ಗುತ್ತಿಗೆ ನೀಡಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಸಿಬಿಐ 12 ಕಡೆಗಳಲ್ಲಿ ದಾಳಿ ನಡೆಸಿ ಶೋಧ ಮಾಡಿದೆ. 
ಟಾಟಾ ಕಂಪೆನಿ ಮೂಲದ ಹೊಟೇಲ್ ಗಳಿಗೆ ರಾಂಚಿ ಮತ್ತು ಪುರಿ ಹೊಟೇಲ್ ಗಳಲ್ಲಿ ಜವಬ್ದಾರಿ ನೀಡಲಾಗಿದೆ. ಇದೇ ಯೋಜನೆಯಡಿ ದೆಹಲಿ ಮೂಲದ ಹೊಟೇಲ್ 1 ಕೋಟಿ ರೂಪಾಯಿಯನ್ನು ಅನುಮತಿ ಶುಲ್ಕವಾಗಿ ರೈಲ್ವೆ ಇಲಾಖೆಗೆ ನೀಡಿದೆ ಎಂದು ಲಾಲೂ ಪ್ರಸಾದ್ ಯಾದವ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಜೆಪಿ ಪ್ರತಿಭಟನೆ: ಮೆಟ್ರೋ, ಇಂಟರ್ನೆಟ್ ಸೇವೆ ಸ್ಥಗಿತ, ಅಕ್ರಮ ಬಂಧನಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕೇಂದ್ರಕ್ಕೆ ಸೂಚನೆ

'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!

ನನ್ನ ಕನಸು ನೀವೇ ಸರ್‌; ನಿಮ್ಮ ಕಣ್ಣಲ್ಲಿ ನೀರು ತರಿಸಿದೆ: ಕಿಚ್ಚ ಸುದೀಪ್ ಮುಂದೆ ಕಣ್ಣೀರಿಟ್ಟ ಮಾಡರ್ನ್ ಮಹಾಕವಿ ಮಂಜು

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ