ದೇಶ

ಹಣ ಅವ್ಯವಹಾರ ಪ್ರಕರಣ: ಜಾರಿ ನಿರ್ದೇಶನಾಲಯದ ಮುಂದೆ ಮಿಸಾ ಭಾರತಿ ಹಾಜರ್

Shilpa D
ನವದೆಹಲಿ: 8 ಸಾವಿರ ಕೋಟಿ ರು ಅಕ್ರಮ ಹಣ ಪ್ರಕರಣದಲ್ಲಿ ಆರ್ ಜೆಡಿ ಸಂಸದೆ  ಹಾಗೂ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾ ಭಾರ್ತಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
ಬೆಳಗ್ಗೆ 11 ಗಂಟೆಗೆ ವೇಳೆಗೆ ಕೇಂದ್ರೀಯ ತನಿಖಾ ಎಜೆನ್ಸಿಯ ತನಿಖಾಧಿಕಾರಿ ಕಚೇರಿಯಲ್ಲಿ ಹಾಜರಾಗಿದ್ದರು.
ಮಿಶಾಲಿ ಪ್ರಿಂಟರ್ಸ್ ಅಂಡ್ ಪ್ಯಾಕರ್ಸ್ ಪ್ರೈವೇಟ್ ಲಿಮಿಟೆಡೆ ಜೊತೆಗಿರುವ ಸಂಬಂಧದ ಬಗ್ಗೆ ಮಿಸಾ ಭಾರತಿ ಅವರನ್ನು ವಿಚಾರಣೆ ನಡೆಸಲಾಯಿತು. ಜೊತೆಗೆ ಈ ಮುಚೆ ಬಂಧಿತವಾಗಿದ್ದ ಆಕೆಯ ಸಿಎ ಜೊತೆಗಿನ ಸಂಬಂಧವೂ ಕೂಡ ವಿಚಾರಣೆ ನಡೆಸಲಾಗಿದೆ.
ಜುಲೈ 8 ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ಪುತ್ರಿ, ಸಂಸದೆ ಮಿಸಾ ಭಾರತಿ ಮತ್ತು ಅಳಿಯ ಶೈಲೇಶ್‌ ಕುಮಾರ್‌ಗೆ ಸೇರಿದ ಮೂರು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು.
ಈ ವಿಷಯ ಸಂಬಂಧ ಇಡಿ ಅಧಿಕಾರಿಗಳು ಆಕೆಯನ್ನು ವಿಚಾರಣೆಗೊಳಪಡಿಸಲಾಗವುದು. ಮಿಸಾ ಭಾರತಿ ಪತಿ ಶೈಲೇಶ್ ಕುಮಾರ್ ಗೂ ಕೂಡ ಹಾಜರಾಗಲು ನಿನ್ನೆ ಸಮನ್ಸ್ ನೀಡಲಾಗಿತ್ತು, ಆದರೆ ಆತ ಹಾಜರಾಗಿಲ್ಲ. 
SCROLL FOR NEXT