ಸಂಗ್ರಹ ಚಿತ್ರ 
ದೇಶ

ಸಮರೋತ್ಸಾಹದಿಂದ ಉಗ್ರ ನಿಗ್ರಹ ಯೋಜನೆ ರೂಪಿಸಿ: ಸೈನಿಕರಿಗೆ ಕೇಂದ್ರ ಸರ್ಕಾರದ ಸಲಹೆ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಚರಣೆಯಲ್ಲಿ ತೊಡಗಿರುವ ಭಾರತೀಯ ಸೇನೆಯ ಸೈನಿಕರು ಸಮರೋತ್ಸಾಹದಿಂದ ತಮ್ಮ ಕಾರ್ಯ ಯೋಜನೆ ಸಿದ್ಧಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರ ಸೈನಿಕರಿಗೆ ಸಲಹೆ ನೀಡಿದೆ.

ನವದೆಹಲಿ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಚರಣೆಯಲ್ಲಿ ತೊಡಗಿರುವ ಭಾರತೀಯ ಸೇನೆಯ ಸೈನಿಕರು ಸಮರೋತ್ಸಾಹದಿಂದ ತಮ್ಮ ಕಾರ್ಯ ಯೋಜನೆ ಸಿದ್ಧಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರ ಸೈನಿಕರಿಗೆ ಸಲಹೆ ನೀಡಿದೆ.

ಇತ್ತೀಚೆಗೆ ಅಮರನಾಥ ಯಾತ್ರಾರ್ಥಿಗಳ ಮೇಲೆ ನಡೆದ ಭೀಕರ ಉಗ್ರ ದಾಳಿ ಬಳಿಕ ಉಗ್ರರ ವಿರುದ್ಧ ಮತ್ತಷ್ಟು ಕಠಿಣ ನಿಲುವು ತಳೆದಿರುವ ಕೇಂದ್ರ ಸರ್ಕಾರ ಸೈನಿಕರಲ್ಲಿ ಉತ್ಸಾಹ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದೆ.  ಅದರಂತೆ ಇಂದು ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಗಳನ್ನು ಮತ್ತಷ್ಟು ತೀವ್ರಗೊಳಿಸುವಂತೆ ಕೇಂದ್ರ ಗೃಹ ಸಚಿವಾಲಯ ಸೇನಾಧಿಕಾರಿಗಳಿಗೆ ಸೂಚಿಸಿದ್ದು, ಸಮರೋತ್ಸಾಹದಿಂದ ಉಗ್ರ  ನಿಗ್ರಹ ಕಾರ್ಯಾಚರಣೆಗಳ ಯೋಜನೆ ರೂಪಿಸುವಂತೆ ಕಿವಿಮಾತು ಹೇಳಿದೆ.

ಅದರಂತೆ ಸೈನಿಕರ ಉತ್ತೇಜನಕ್ಕಾಗಿ ಕಳೆದ 2 ದಿನಗಳಿಂದ ಇಬ್ಬರು ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್ ಹಾಗೂ ಹಂನ್ಸರಾಜ್ ಅಹಿರಾ ಅವರು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಅಷ್ಟು ಮಾತ್ರವಲ್ಲದೇ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್  ಜನರಲ್ ಬಿಪಿನ್ ರಾವತ್ ಮತ್ತು ಸಿಆರ್ ಪಿಎಫ್ ಡಿಜಿಪಿ ಆರ್ ಆರ್ ಭಟ್ನಾಗರ್ ಅವರೂ ಕೂಡ ಕಾಶ್ಮೀರಕ್ಕೆ ಭೇಟಿ ನೀಡುವ ಮೂಲಕ ಸೈನಿಕರ ಆತ್ಮ ಸ್ಥೈರ್ಯ ಹೆಚ್ಚಿಸಿದ್ದರು. ಈಗಾಗಲೇ ಕಣಿವೆ ರಾಜ್ಯದಾದ್ಯಂತ ಹೈಅಲರ್ಟ್  ಘೋಷಣೆ ಮಾಡಲಾಗಿದ್ದು, ಅಮರ್ ನಾಥ್ ಯಾತ್ರೆಗೆ ಈ ಹಿಂದೆಂದೂ ಇರದ ಭದ್ರತೆ ಕಲ್ಪಿಸಲಾಗಿದೆ.

ದಾಳಿ ಬಳಿಕ ಸ್ವತಃ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರು ಕಣಿವೆ ರಾಜ್ಯದ ಭದ್ರತಾ ಮೇಲ್ವಿಚಾರಣೆ ನಡೆಸುತ್ತಿದ್ದು, ಪ್ರಮುಖವಾಗಿ ಅಮರ್ ನಾಥ್ ಯಾತ್ರೆಯ ಭದ್ರತೆ ಕುರಿತಂತೆ ಕಾಳಜಿ ವಹಿಸಿದ್ದಾರೆ. ಜೂನ್ 29ರಿಂದ  ಆರಂಭವಾಗಿರುವ ಪವಿತ್ರ ಅಮರನಾಥ್ ಯಾತ್ರೆ ಆಗಸ್ಚ್ 7ರಂದು ಮುಕ್ತಾಯವಾಗಲಿದ್ದು, ಭದ್ರತೆಗಾಗಿ 21 ಸಾವಿರಕ್ಕೂ ಅಧಿಕ ಸೈನಿಕರನ್ನು ನಿಯೋಜಿಸಲಾಗಿದೆ. ಕಳೆದ ವರ್ಷ ಇದೇ ಯಾತ್ರೆಗೆ 9.500 ಸೈನಿಕರನ್ನು ಭದ್ರತೆಗಾಗಿ  ನಿಯೋಜಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!