ದೇಶ

ಶೇ.73 ರಷ್ಟು ಭಾರತೀಯರಿಗೆ ಮೋದಿ ಸರ್ಕಾರದ ಬಗ್ಗೆ ವಿಶ್ವಾಸವಿದೆ: ವರದಿ

Srinivas Rao BV
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಶೇ.73 ರಷ್ಟು ಭಾರತೀಯರಿಗೆ ವಿಶ್ವಾಸವಿದೆ ಎಂದು ಆರ್ಥಿಕ ಸಹಕಾರ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ವರದಿ ಹೇಳಿದೆ. 
ಒಇಸಿಡಿಯ ಗೌರ್ನಮೆಂಟ್ ಅಟ್ ಎ ಗ್ಲಾನ್ಸ್ ವರದಿಯಲ್ಲಿ ಬೇರೆ ಬೇರೆ ದೇಶಗಳ ಜನತೆಯಲ್ಲಿ ತಮ್ಮ ಸರ್ಕಾರದ ಬಗ್ಗೆ ಇರುವ ವಿಶ್ವಾಸದ ಬಗ್ಗೆ ಸಮೀಕ್ಷೆಯ ವಿವರಗಳನ್ನು ಪ್ರಕಟಿಗೊಂಡಿದ್ದು, ಭಾರತದಲ್ಲಿ ಶೇ.73 ರಷ್ಟು ಜನರು ಮೋದಿ ಅವರ ಆಡಳಿತದ ಬಗ್ಗೆ ವಿಶ್ವಾಸ ಹೊಂದಿದ್ದಾರೆ ಎಂದು ಹೇಳಿದೆ. ಜನತೆಯ ವಿಶ್ವಾಸ ಗಳಿಸಿರುವ ಸರ್ಕಾರಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿ ಸರ್ಕಾರ ಮುಂಚೂಣಿಯಲ್ಲಿದ್ದು, ಭಾರತ ಸರ್ಕಾರ ವಿಶ್ವದಲ್ಲೇ ಅತಿ ಹೆಚ್ಚು ಜನರು ವಿಶ್ವಾಸ ಹೊಂದಿರುವ ಸರ್ಕಾರ ಎಂಬ ಖ್ಯಾತಿ ಗಳಿಸಿದೆ. 
ನಂತರದ ಸ್ಥಾನದಲ್ಲಿ ಕೆನಡಾದ ಸರ್ಕಾರವಿದ್ದು, ಅಲ್ಲಿನ ಪ್ರಧಾನಿ ಜಸ್ಟಿನ್ ಟುಡರ್ ಅವರ ಸರ್ಕಾರ ಹೆಚ್ಚು ಜನತೆಯ ವಿಶ್ವಾಸ ಗಳಿಸಿರುವ ಎರಡನೇ ಸರ್ಕಾರವಾಗಿದ್ದು, ಶೇ.62 ರಷ್ಟು ಜನರು ವಿಶ್ವಾಸ ಹೊಂದಿದ್ದಾರೆ. ಅಚ್ಚರಿಯೆಂದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರ್ಕಾರದ ಮೇಲೆ ಅಮೆರಿಕದ ಶೇ.30 ರಷ್ಟು ಮಂದಿಗೆ ಮಾತ್ರ ವಿಶ್ವಾಸವಿದೆ, ಇನ್ನು ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿರುವ ಬ್ರಿಟನ್ ನ ಥೆರೇಸಾ ಮೇ ಸರ್ಕಾರದ ಬಗ್ಗೆ ಶೇ.41 ರಷ್ಟು ಜನತೆಗೆ ವಿಶ್ವಾಸವಿದೆ ಎಂದು ತಿಳಿದುಬಂದಿದೆ. 
SCROLL FOR NEXT