ದೇಶ

ಬಿಜೆಪಿ ತೊಲಗಿಸಿ ಅಭಿಯಾನ, ಮಮತಾ ಬ್ಯಾನರ್ಜಿಯ ಹಗಲುಗನಸು: ಜಾವಡೆಕರ್

Lingaraj Badiger
ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭಾರತದಿಂದ ಬಿಜೆಪಿ ತೊಲಗಿಸಿ ಅಭಿಯಾನ ಒಂದು ಹಗಲುಗನಸು ಮತ್ತು ಇದು ಅವರ ಹತಾಶೆಯನ್ನು ತೋರಿಸುತ್ತದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್ ಅವರು ಶನಿವಾರ ಹೇಳಿದ್ದಾರೆ.
ನಿನ್ನೆಯಷ್ಟೇ ಮಮತಾ ಬ್ಯಾನರ್ಜಿ ಅವರು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ನೆರೆರಾಷ್ಟ್ರಗಳ ಜತೆ ಉತ್ತಮ ಸಂಬಂಧ ವೃದ್ಧಿಸುವುದು ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ವಿಫಲವಾಗಿದ್ದು ಭಾರತದಿಂದ ಬಿಜೆಪಿ ತೊಲಗಿಸಿ ಅಭಿಯಾನವನ್ನು ಆಗಸ್ಟ್ 9ರಿಂದ ಪ್ರಾರಂಭಿಸಲಾಗುವುದು ಎಂದು ಹೇಳಿದ್ದರು.
ಇಂದು ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ಜಾವಡೆಕರ್ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ದೇಶದ ಬಡ ಜನರೊಂದಿಗೆ ಸಂಪರ್ಕವನ್ನು ಹೊಂದಿದ್ದಾರೆ, ಆದ್ದರಿಂದ ಬಡವರು ನಮ್ಮೊಂದಿಗೆ ಇದ್ದಾರೆ. ದಿನದಿಂದ ದಿನಕ್ಕೆ ನಾವು ಮತ್ತಷ್ಟು ಬಲಿಷ್ಠರಾಗುತ್ತಿದ್ದೇವೆ. ಆದರೆ ನಾವು ಅವರಿಗೆ ವಿನಮ್ರರಾಗಬೇಕೆಂದು ಬಯಸುತ್ತೇವೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೇರುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಹತಾಶೆಗೊಂಡಿರುವ ಮಮತಾ ಬ್ಯಾನರ್ಜಿ ಅವರು ಬಿಜೆಪಿಯನ್ನು ತೊಲಗಿಸುವ ಹಗಲುಗನಸು ಕಾಣುತ್ತಿದ್ದಾರೆ ಎಂದು ಜಾವಡೆಕರ್ ವಾಗ್ದಾಳಿ ನಡೆಸಿದ್ದಾರೆ.
SCROLL FOR NEXT