ದೇಶ

ಭಾರತೀಯ ಮತ್ತು ಯಾವುದೇ ದೇಶದ ಹೆಣ್ಣುಮಕ್ಕಳಿಗೆ ಯಾವಾಗಲೂ ಸ್ವಾಗತ-ಜನರ ಮನಗೆದ್ದ ಸುಷ್ಮಾ ಸ್ವರಾಜ್ ಟ್ವೀಟ್

Sumana Upadhyaya
ನವದೆಹಲಿ: ತಮ್ಮ ಟ್ವೀಟ್ ಮೂಲಕ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತೊಮ್ಮೆ ಜನರ ಮನಗೆದ್ದಿದ್ದಾರೆ. ವೀಸಾ ಕೋರಿ ಅವರಿಗೆ ಒಬ್ಬರು ಟ್ವೀಟ್ ಮಾಡಿದ್ದರು. ಅದಕ್ಕೆ ಟ್ವೀಟ್ ಮೂಲಕ ಉತ್ತರಿಸಿದ ಸುಷ್ಮಾ ಸ್ವರಾಜ್, ಭಾರತೀಯ ಹೆಣ್ಣುಮಕ್ಕಳು ಮತ್ತು ಪಾಕಿಸ್ತಾನ ಅಥವಾ ಇತರ ಯಾವುದೇ ದೇಶದಿಂದ ಬಂದ ಹೆಣ್ಣುಮಕ್ಕಳನ್ನು ಯಾವಾಗಲೂ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
65 ವರ್ಷದ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರಿಗೆ ಟ್ವಿಟ್ಟರ್ ನಲ್ಲಿ 8.69 ದಶಲಕ್ಷ ಅನುಯಾಯಿಗಳಿದ್ದಾರೆ. ವಿದೇಶಗಳಲ್ಲಿ ಹಲವು ಭಾರತೀಯರ ಸಮಸ್ಯೆಗಳನ್ನು ಟ್ವಿಟ್ಟರ್ ಮೂಲಕ ಅರಿತುಕೊಂಡು ಅವರು ಪರಿಹರಿಸಿದ್ದಾರೆ.
ನಿನ್ನೆಯಷ್ಟೇ ವಾಲ್ ಸ್ಟ್ರೀಟ್ ಪತ್ರಿಕೆಯ ಸಂಪಾದಕೀಯ ಪುಟದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭಾರತದ ಉತ್ತಮ ಪ್ರೀತಿಯ ರಾಜಕಾರಣಿ ಎಂದು ಶ್ಲಾಘಿಸಲಾಗಿತ್ತು. ವಿದೇಶಗಳಲ್ಲಿ ತೊಂದರೆಯಲ್ಲಿ ಸಿಲುಕಿ ಹಾಕಿಕೊಂಡಿರುವ ಭಾರತೀಯ ಸಹಾಯಕ್ಕೆ ಅವರು ತೋರುವ ಕಾಳಜಿ ಅಭೂತಪೂರ್ವ ಎಂದು ಪತ್ರಿಕೆಯ ಸಂಪಾದಕೀಯದಲ್ಲಿ ಬರೆಯಲಾಗಿತ್ತು. 
ಈ ತಿಂಗಳ ಆರಂಭದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿ ಒಸಮಾ ಆಲಿಯವರಿಗೆ ಚಿಕಿತ್ಸೆಗೆ ದೆಹಲಿಗೆ ಬರಲು ವೈದ್ಯಕೀಯ ವೀಸಾ ಕೊಡಿಸಿದ್ದರು. ಮತ್ತೊಂದು ಘಟನೆಯಲ್ಲಿ ಪಾಕಿಸ್ತಾನದ 4 ತಿಂಗಳ ಮಗುವಿನ ಹೃದಯ ಶಸ್ತ್ರಚಿಕಿತ್ಸೆಗೆ ವೈದ್ಯಕೀಯ ವೀಸಾವನ್ನು ಸುಷ್ಮಾ ಸ್ವರಾಜ್ ಒದಗಿಸಿದ್ದರು.
SCROLL FOR NEXT