ಹೊಸ 200 ರು. ನೋಟಿನ ಮಾದರಿ 
ದೇಶ

ಆಗಸ್ಟ್​ ವೇಳೆ ಗೆ ಜನರ ಕೈ ಸೇರಲಿದೆ ಹೊಸ 200 ರು. ನೋಟು!

ನೋಟು ನಿಷೇಧ ಕ್ರಮ ಘೊಷಣೆಯಾದ ಸುಮಾರು 9 ತಿಂಗಳ ನಂತರ ಹೊಸ 200 ರುಪಾಯಿ ಮುಖಬೆಲೆಯ ನೋಟು ಚಲಾವಣೆಗೆ ಬರಲು ಸಿದ್ಧವಾಗಿದ್ದು, ಇದೇ ಆಗಸ್ಟ್ ವೇಳೆಗೆ ಹೊಸ ನೋಟು ಜನರ ಕೈಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನವದೆಹಲಿ: ನೋಟು ನಿಷೇಧ ಕ್ರಮ ಘೊಷಣೆಯಾದ ಸುಮಾರು 9 ತಿಂಗಳ ನಂತರ ಹೊಸ 200 ರುಪಾಯಿ ಮುಖಬೆಲೆಯ ನೋಟು ಚಲಾವಣೆಗೆ ಬರಲು ಸಿದ್ಧವಾಗಿದ್ದು, ಇದೇ ಆಗಸ್ಟ್ ವೇಳೆಗೆ ಹೊಸ ನೋಟು ಜನರ ಕೈಸೇರುವ  ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಹೊಸ 200 ರು. ಮುಖಬೆಲೆಯ ನೋಟುಗಳನ್ನು ಮುದ್ರಿಸುವ ಕಾರ್ಯಕ್ಕೆ ಆರ್ ಬಿಐ ಚಾಲನೆ ನೀಡಿದ್ದು, ಮೊದಲ ಭಾಗದ ಹೊಸ ನೋಟುಗಳು ಇದೇ ಆಗಸ್ಟ್ ವೇಳೆ ಚಲಾವಣೆಗೆ ಬರುವ ಸಾಧ್ಯತೆ ಇದೆ.  500  ರು. ಹಾಗೂ 2 ಸಾವಿರ ರು. ನೋಟುಗಳ ನಡುವಿನ ಅಂತರದಿಂದಾಗಿ ಉಂಟಾಗಿರುವ ಚಿಲ್ಲರೆ ಸಮಸ್ಯೆ ನಿವಾರಿಸುವುದಕ್ಕಾಗಿಯೇ ಆರ್​ಬಿಐ 200 ರು. ಹೊಸ ನೋಟು ಬಿಡುಗಡೆಗೆ ನಿರ್ಧರಿಸಿದೆ ಎನ್ನಲಾಗಿದೆ. ಈ ಹಿಂದೆ  2017ವರ್ಷಾಂತ್ಯದಲ್ಲಿ ಹೊಸ 200 ರು. ನೋಟು ಚಲಾವಣೆಗೆ ತರುವ ಕುರಿತು ಸುದ್ದಿಗಳು ಹರಿದಾಡಿತ್ತಾದರೂ, ದಿನಗಳೆದಂತೆ ಚಿಲ್ಲರೆ ಸಮಸ್ಯೆ ವ್ಯಾಪಕವಾಗುತ್ತಿರುವ ಹಿನ್ನಲೆಯಲ್ಲಿ ಹೊಸ 200 ರು. ನೋಚುಗಳನ್ನು ಇನ್ನೂ ಬೇಗನೆ  ಚಲಾವಣೆಗೆ ತರಲು ಆರ್ ಬಿಐ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಇನ್ನು ನೋಟು ನಿಷೇಧವಾದ ಬಳಿಕ ಚಿಲ್ಲರೆ ಅಭಾವದಿಂದಾಗಿ ದಿನಕಳೆದಂತೆ 2,000 ರು. ನೋಟು ಪಡೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಗ್ರಾಹಕರು ಬ್ಯಾಂಕುಗಳಲ್ಲಿ ಕಡಿಮೆ ಮುಖಬೆಲೆ ನೋಟುಗಳನ್ನೇ ನೀಡುವಂತೆ  ಬೇಡಿಕೆ ಇಡುತ್ತಿದ್ದಾರೆ. ಇದೇ ಕಾರಣಕ್ಕೆ ಆಗಸ್ಟ್ ತಿಂಗಳ ಅವಧಿಯಲ್ಲೇ ಹೊಸ 200 ರು. ನೋಟುಗಳನ್ನು ಚಲಾವಣೆಗೆ ತರಲು ಆರ್ ಬಿಐ ಮುಂದಾಗಿದೆ.

ಹೊಸ 200ರು ಮುಖಬೆಲೆಯ ನೋಟು ಎಟಿಎಂಗಳಲ್ಲಿ ಲಭ್ಯವಾಗುವುದಿಲ್ಲ!
ಏತನ್ಮಧ್ಯೆ ಹೊಸ ನೋಟಿನ ಚಲಾವಣೆ ಕುರಿತು ದಿನಕ್ಕೊಂದು ಸುದ್ದಿ ಹರಿದಾಡುತ್ತಿದ್ದು, ಪ್ರಸ್ತುತ ಬಿಡುಗಡೆಯಾಗುತ್ತಿರುವ ಹೊಸ 200 ರು. ಮುಖಬೆಲೆಯ ನೋಟುಗಳು ಎಟಿಎಂ ಗಳಲ್ಲಿ ಲಭ್ಯವಿರುವುದಿಲ್ಲವಂತೆ. ಹೀಗೆಂದು ಕೆಲ  ಪತ್ರಿಕೆಗಳು ಸುದ್ದಿ ಬಿತ್ತರಿಸಿದ್ದು, ಹೊಸ ನೋಟುಗಳನ್ನು ನೇರವಾಗಿ ಬ್ಯಾಂಕ್ ಅಥವಾ ಆರ್ ಬಿಐ ಕಚೇರಿಗಳಿಂದಲೇ ಪಡೆಯಬೇಕು ಎಂದು ಸುದ್ದಿಗಳಲ್ಲಿ ತಿಳಿಸಲಾಗಿದೆ. ಆದರೆ ಈ ಬಗ್ಗೆ ಆರ್ ಬಿಐ ಆಗಲಿ ಅಥವಾ ಕೇಂದ್ರ  ಸರ್ಕಾರವಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್